'ದಿ ಯೆನೆಪೊಯ ಶಿಕ್ಷಕ ಪ್ರಶಸ್ತಿ-2018'

Update: 2018-10-09 17:13 GMT

ಮಂಗಳೂರು, ಅ.9: ದಿ ಯೆನೆಪೊಯ ಮೊಹಿಯುದ್ದೀನ್ ಕುಂಞಿ ಮೆಮೋರಿಯಲ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ಜಪ್ಪಿನಮೊಗರು ಸಂಸ್ಥೆಯು ದ.ಕ. ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಶಿಕ್ಷಕರು/ಮುಖ್ಯೋಪಾಧ್ಯಾಯರು ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸಲು ಮತ್ತು ಕ್ರಿಯಾಶೀಲರನ್ನಾಗಿಸಲು ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದೆ.

ಈ ಪ್ರಶಸ್ತಿ ಪಡೆಯಲು ಸರಕಾರಿ/ ಅನುದಾನಿತ/ ಅನುದಾನರಹಿತ ಶಾಲಾ ಸಂಸ್ಥೆಗಳ ಶಿಕ್ಷಕರು ಅಥವಾ ರಾಜ್ಯ ಸರಕಾರ/ ಕೇಂದ್ರ ಸರಕಾರದ ಶಿಕ್ಷಕ ವೃತ್ತಿಯಲ್ಲಿರುವವರು ಅರ್ಹರಾಗಿರುತ್ತಾರೆ.

ಈ ವಾರ್ಷಿಕ ಪ್ರಶಸ್ತಿಯು 10 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರ ಒಳಗೊಂಡಿದೆ. ನ.14ರಂದು ಸ್ಥಾಪಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು.

ಅರ್ಹತೆಗಳು: ಶಿಕ್ಷಕರು 10 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿರಬೇಕು. ಶಿಕ್ಷಕರು ಶಿಕ್ಷಕ ವೃತ್ತಿಯ ಯೋಗ್ಯತಾ ಪ್ರಮಾಣಪತ್ರ ಮತ್ತು ಅತ್ಯುತ್ತಮ ಶಿಕ್ಷಕರು ಎಂಬುದಕ್ಕೆ ಸಾಕ್ಷಗಳನ್ನು ಹೊಂದಿರಬೇಕು. ಶಿಕ್ಷಕರು ಈ ಮೊದಲು ಯಾವುದೇ ರಾಜ್ಯ/ಕೇಂದ್ರ ಸರಕಾರದ ಪ್ರಶಸ್ತಿ ಪಡೆದಿರಬಾರದು.

ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲು ಸಂಸ್ಥೆಯು ಶಿಕ್ಷಣ ಕೇತ್ರದಲ್ಲಿ ಅನುಭವಿ ವ್ಯಕ್ತಿಗಳನ್ನು ಒಳಗೊಂಡ ಸಮಿತಿ ರಚಿಸಿದೆ. ಅರ್ಜಿ ಸಲ್ಲಿಸುವ ಶಿಕ್ಷಕರು ತಮ್ಮ ಅರ್ಜಿಯೊಂದಿಗೆ ಎಲ್ಲ ಅರ್ಹತಾ ಪತ್ರಿಕೆಗಳ ಪ್ರತಿಯನ್ನು ಶಾಲಾ ಮುಖ್ಯೋಪಾಧ್ಯಾಯರು/ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಂದ ದೃಢೀಕರಿಸಬೇಕು.

ಅರ್ಜಿ ಸಲ್ಲಿಸಲು ಅ.15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರಾಂಶುಪಾಲರು, ದಿ ಯೆನೆಪೋಯ ಶಾಲೆ, ಜಪ್ಪಿನಮೊಗರು, ಮಂಗಳೂರು, ದೂ.ಸಂ.: 0824- 2241846 / 7025624387ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News