ಬೆಳ್ತಂಗಡಿ: ಬಾಲಕಿಗೆ ಕಿರುಕುಳ; ಆರೋಪಿ ಸೆರೆ

Update: 2018-10-09 17:20 GMT

ಬೆಳ್ತಂಗಡಿ, ಅ. 9: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ವಿವಾಹಿತ ವ್ಯಕ್ತಿಯೋರ್ವ ಹನ್ನೆರಡರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಿಲ್ಲೂರು ನಿವಾಸಿ ಹಂಸ (30) ಎಂದು ತಿಳಿದುಬಂದಿದೆ.

ಈತ ಸ್ಥಳೀಯ ಮನೆಯೊಂದಕ್ಕೆ ಬಟ್ಟೆ ಹೊಲಿಸುವ ನೆಪದಲ್ಲಿ ಹೋಗಿದ್ದು ಅಲ್ಲಿ ಬಾಲಕಿಯೊಬ್ಬಳೇ ಇರುವುದನ್ನು ಗಮನಿಸಿ, ಆಕೆಯನ್ನು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಈ ಸಂದರ್ಭ ಬಾಲಕಿ ರಕ್ಷಣೆಗಾಗಿ ಕೂಗಿಕೊಂಡ ವೇಳೆ ಆತ ಪರಾರಿಯಾಗಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News