ಮಂಚಿ: ಕೊಪ್ಪಳ ಅಂಗನವಾಡಿ ಕೇಂದ್ರವನ್ನು ಮರು ಪ್ರಾರಂಭಿಸುವಂತೆ ಎಸ್ಡಿಪಿಐ ಒತ್ತಾಯ

Update: 2018-10-09 17:25 GMT

ಬಂಟ್ವಾಳ, ಅ. 9: ಮುಚ್ಚಿಹೋಗಿರುವ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನಿರ್ಬೈಲ್ ಕೊಪ್ಪಳದಲ್ಲಿರುವ ಅಂಗನವಾಡಿ ಕೇಂದ್ರವನ್ನು ಮರು ಪ್ರಾರಂಭಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಮಂಚಿ ಗ್ರಾಪಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಶಿಶು ಯೋಜನಾಭಿವೃದ್ಧಿ ಅಧಿಕಾರಿ, ಮಕ್ಕಳ ಹಾಗೂ ಮಹಿಳಾ ಇಲಾಖೆಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ನಿರ್ಬೈಲ್ ಕೊಪ್ಪಳದಲ್ಲಿರುವ ಅಂಗನವಾಡಿ ಕೇಂದ್ರವನ್ನು ಕಳೆದ 8 ವರ್ಷಗಳಿಂದ ವಿನಾಃ ಕಾರಣದಿಂದ ಮುಚ್ಚಿ, ಇಲ್ಲಿನ ಮಕ್ಕಳನ್ನು ದೂರದ ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಿದೆ. ಇದರಿಂದ ಮಕ್ಕಳು ಸುಮಾರು ಒಂದು ಕಿ.ಲೋ. ಮೀಟರ್‍ನಷ್ಟು ಕ್ರಮಿಸಿ ಅಂಗವಾಡಿ ಕೇಂದ್ರ ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ಪರಿಸರದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿವೆ. ಆದ್ದರಿಂದ ಮುಚ್ಚಿರುವ ಅಂಗವಾಡಿ ಕೇಂದ್ರವನ್ನು ಪುನರ್ ಆರಂಭಿಸುವಂತೆ ಮನವಿ ಮೂಲಕ ಒತ್ತಾಯಿಸಲಾಗಿದೆ.

ಈ ಅಂಗವಾಗಿ ಕೇಂದ್ರದಲ್ಲಿ ಮಕ್ಕಳು ಕಲಿಯುತ್ತಿರುವಾಗಲೇ ಯಾವುದೇ ಕಾರಣ ನೀಡದೇ ಮುಚ್ಚಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಹೋರಾಟಗಾರ ಫೈಝಲ್ ಮಂಚಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ಕ್ಷೇತ್ರ ಸದಸ್ಯ ಶಾಕಿರ್ ಅಳಕೆಮಜಲು, ಶಾಹಿದ್ ಮಂಚಿ, ಸಿನಾನ್  ಕುಕ್ಕಾಜೆ, ಶಮೀರ್ ಕುಕ್ಕಾಜೆ, ಫರ್ಹಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News