ಯುಕ್ರೇನ್ ಸೇನಾ ಸ್ಫೋಟಕ ದಾಸ್ತಾನಿನಲ್ಲಿ ಬೆಂಕಿ; 10,000 ಮಂದಿ ಸ್ಥಳಾಂತರ

Update: 2018-10-09 17:38 GMT

ಕೀವ್ (ಯುಕ್ರೇನ್), ಅ. 9: ಯುಕ್ರೇನ್ ರಾಜಧಾನಿ ಕೀವ್‌ನ ಪೂರ್ವಕ್ಕೆ 176 ಕಿ.ಮೀ. ದೂರದಲ್ಲಿರುವ, ರಕ್ಷಣಾ ಸಚಿವಾಲಯಕ್ಕೆ ಸೇರಿದ ಸ್ಫೋಟಕ ದಾಸ್ತಾನಿನಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿಕೊಂಡ ಬೆನ್ನಿಗೇ ಸ್ಫೋಟಗಳು ಸಂಭವಿಸಿದ್ದು, ಸುತ್ತಮುತ್ತಲಿನ 10,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಯಾರಾದರು ಗಾಯಗೊಂಡಿದ್ದಾರೆಯೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.

20 ಕಿ.ಮೀ. ತ್ರಿಜ್ಯದಲ್ಲಿನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಹಾಗೂ ರಸ್ತೆ ಮತ್ತು ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ

ನೂರಾರು ರಕ್ಷಣಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ತುರ್ತು ಸೇವೆಗಳ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

‘‘ಸುಮಾರು 10,000 ಮಂದಿಯನ್ನು ಸ್ಥಳಾಂತರಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ಕಳೆದ ವರ್ಷ ಯುಕ್ರೇನ್‌ನ ವೈನಿಟ್ಸ ವಲಯದಲ್ಲಿರುವ ಸೇನಾ ದಾಸ್ತಾನಿನಲ್ಲಿ ಬೃಹತ್ ಸ್ಫೋಟಗಳು ಸಂಭವಿಸಿದ್ದು, 24,000 ಜನರನ್ನು ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News