ದೇಶದ ಪರವಾಗಿ ನ್ಯಾಯಾಧೀಶರಿಂದ ಕ್ಷಮೆ ಕೋರುವೆ: ಟ್ರಂಪ್

Update: 2018-10-09 17:43 GMT

ವಾಶಿಂಗ್ಟನ್, ಅ. 9: ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಾಧೀಶರಾಗಿ ಆಯ್ಕೆಗೊಂಡ ಬ್ರೆಟ್ ಕ್ಯಾವನೋ ಬಳಿ ಇಡೀ ದೇಶದ ಪರವಾಗಿ ಕ್ಷಮೆ ಕೋರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಆರೋಪಗಳನ್ನು ಎದುರಿಸುತ್ತಿರುವ ನೂತನ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ವಿವಾದಾಸ್ಪದವಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಶ್ವೇತಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ನ್ಯಾಯಮೂರ್ತಿ ಬ್ರೆಟ್ ಕ್ಯಾವನೋ ಪಕ್ಕದಲ್ಲಿ ನಿಂತ ಟ್ರಂಪ್, ಲೈಂಗಿಕ ಹಲ್ಲೆ ಆರೋಪಗಳಲ್ಲಿ ಅವರು ಅಮಾಯಕರು ಎನ್ನುವುದು ಸಾಬೀತಾಗಿದೆ ಎಂದು ಹೇಳಿದರು.

ನ್ಯಾಯಾಧೀಶರ ವಿರುದ್ಧ ಇಬ್ಬರು ಮಹಿಳೆಯರು ಲೈಂಗಿಕ ಹಲ್ಲೆ ಆರೋಪಗಳನ್ನು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಓರ್ವ ಮಹಿಳೆಯು ಸೆನೆಟ್ ಮಂದೆ ಹಾಜರಾಗಿ, ಬ್ರೆಟ್ ವಿರುದ್ಧ ಸಾಕ್ಷ ನುಡಿದರು.

ಯಾವುದೇ ಕಹಿ ಭಾವನೆಯಿಲ್ಲ: ನ್ಯಾಯಾಧೀಶ

ಆದರೆ, ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶ ಬ್ರೆಟ್ ಕ್ಯಾವನೋ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಇಂಗಿತವನ್ನು ವ್ಯಕ್ತಪಡಿಸಿದರು.

‘‘ನನ್ನಲ್ಲಿ ಯಾವುದೇ ಕಹಿ ಭಾವನೆಯಿಲ್ಲ ಹಾಗೂ ಉನ್ನತ ನ್ಯಾಯಾಲಯಕ್ಕೆ ನಾನು ರಾಜಕೀಯವನ್ನು ತರುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News