ಪಾಕ್: 1,300 ಕಿ.ಮೀ. ವ್ಯಾಪ್ತಿಯ ‘ಘೋರಿ’ ಕ್ಷಿಪಣಿ ಪರೀಕ್ಷೆ

Update: 2018-10-09 17:45 GMT

ಇಸ್ಲಾಮಾಬಾದ್, ಅ. 9: ಪಾಕಿಸ್ತಾನ ಸೋಮವಾರ ‘ಘೋರಿ’ ಪ್ರಕ್ಷೇಪಕ ಕ್ಷಿಪಣಿಯ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಕ್ಷಿಪಣಿಯು 1,300 ಕಿ.ಮೀ. ವರೆಗೆ ಸಾಂಪ್ರದಾಯಿಕ ಮತ್ತು ಪರಮಾಣು ಅಸ್ತ್ರಗಳೆರಡನ್ನೂ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಹೆಚ್ಚಿನ ಭಾರತೀಯ ನಗರಗಳು ಅದರ ವ್ಯಾಪ್ತಿಯಲ್ಲಿ ಬರುತ್ತವೆ.

ಪರೀಕ್ಷೆಯನ್ನು ಆರ್ಮಿ ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್ ನಡೆಸಿದೆ ಎಂದು ಸೇನೆಯು ಮಾಧ್ಯಮ ವಿಭಾಗ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪಾಕಿಸ್ತಾನವು ಎಪ್ರಿಲ್‌ನಲ್ಲಿ ದೇಶಿ ನಿರ್ಮಿತ ಸುಧಾರಿತ ಬಾಬರ್ ಕ್ರೂಸ್ ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ನಡೆಸಿತ್ತು. ಅದು ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಗಳನ್ನು 700 ಕಿ.ಮೀ. ದೂರದವರೆಗೆ ಸಾಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News