ಭಟ್ಕಳ: ವೆಲ್ಫೇರ್ ಆಸ್ಪತ್ರೆಯಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್ ಉದ್ಘಾಟನೆ
Update: 2018-10-10 19:43 IST
ಭಟ್ಕಳ, ಅ. 10: ವೆಲ್ಫೇರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಆಂಬ್ಯುಲೆನ್ಸ್ ವಾಹನವನ್ನು ಆಸ್ಪತ್ರೆಯ ಹಿರಿಯ ನಿದೇರ್ಶಕ ಸೈಯದ್ ಹಸನ್ ಬರ್ಮಾವರ್ ಲೊಕಾರ್ಪಣೆ ಗೊಳಿಸಿದರು.
ರೋಗಿಗಳ ಹಿತದೃಷ್ಟಿಯಿಂದ ಆಂಬ್ಯುಲೆನ್ಸ್ ವಾಹನದಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ಆಡಳಿತ ಮಂಡಳಿಯ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದರು. ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಮುಹಮ್ಮದ್ ಜಾಫರ್ ಫಖ್ಖಿಭಾವ್ ನದ್ವಿಯವರ ಪ್ರಾರ್ಥನೆಯೊಂದಿಗೆ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ಮಂಡಳಿಯ ಕಾದಿರ್ ಮೀರಾ ಪಟೇಲ್, ಮೌಲಾನ ಸೈಯ್ಯದ್ ಝುಬೈರ್, ಯೂನೂಸ್ ರುಕ್ನುದ್ದೀನ್‌ಮ ಸಲಾಹುದ್ದೀನ್ ಎಸ್.ಕೆ, ಇಸ್ಮಾಯಿಲ್ ಮೊಹತೇಶಮ್, ಮೌಲಾನ ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ, ಮೌಲಾನ ಝೀಯಾವುರ್ರಹ್ಮಾನ್ ನದ್ವಿ, ಮತ್ತಿತರರು ಉಪಸ್ಥಿತರಿದ್ದರು.