ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡುತ್ತೀರಾ ?: ಹಾಗಾದರೆ ಈ ಅಪಾಯದ ಬಗ್ಗೆ ತಿಳಿದುಕೊಳ್ಳಿ

Update: 2018-10-10 15:29 GMT

 ಲಂಡನ್, ಅ. 10: ಜನಪ್ರಿಯ ಸಂದೇಶ ವಿನಿಮಿಯ ಆ್ಯಪ್ ವಾಟ್ಸ್‌ಆ್ಯಪ್‌ನಲ್ಲಿನ ಒಂದು ತಾಂತ್ರಿಕ ದೋಷ (ಬಗ್)ದಿಂದಾಗಿ ಹ್ಯಾಕರ್‌ಗಳು ಜನರ ವಾಟ್ಸ್‌ಆ್ಯಪ್ ಖಾತೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ತಂತ್ರಜ್ಞಾನ ವೆಬ್‌ಸೈಟ್‌ಗಳಾದ ‘ಝಡ್‌ಡಿನೆಟ್’ ಮತ್ತು ‘ದ ರಿಜಿಸ್ಟರ್’ ಬುಧವಾರ ವರದಿ ಮಾಡಿವೆ.

ಬಳಕೆದಾರನೊಬ್ಬ ಒಳಬರುವ ವೀಡಿಯೊ ಕರೆಯನ್ನು ಸ್ವೀಕರಿಸಿದಾಗ, ಹ್ಯಾಕರ್‌ಗಳು ಆತನ ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದಿವೆ.

ಈ ತಾಂತ್ರಿಕ ದೋಷವು ಆ್ಯಂಡ್ರಾಯ್ಡ್ ಮತ್ತು ಐಫೋನ್- ಎರಡೂ ಫೋನ್‌ಗಳಲ್ಲಿವೆ.

ಈ ದೋಷವನ್ನು ಆಗಸ್ಟ್ ಕೊನೆಯಲ್ಲಿ ಪತ್ತೆಹಚ್ಚಲಾಗಿತ್ತು ಹಾಗೂ ಅಕ್ಟೋಬರ್ ಆದಿ ಭಾಗದಲ್ಲಿ ವಾಟ್ಸ್‌ಆ್ಯಪ್‌ನ ಮಾಲೀಕತ್ವ ಹೊಂದಿರುವ ಫೇಸ್‌ಬುಕ್ ಸಮಸ್ಯೆಯನ್ನು ಸರಿಪಡಿಸಿತು ಎಂದು ಅವು ಹೇಳಿವೆ.

ಇದೊಂದು ದೊಡ್ಡ ವಿಷಯವಾಗಿದೆ ಎಂದು ದೋಷವನ್ನು ಪತ್ತೆಹಚ್ಚಿದ ‘ಗೂಗಲ್ ಪ್ರಾಜೆಕ್ಟ್ ಝೀರೊ’ದ ಸಂಶೋಧಕ ಟ್ರಾವಿಸ್ ಒರ್ಮಾಂಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News