ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಸಾಗಿಸುತ್ತಿದ್ದ ರಷ್ಯಾದ ರಾಕೆಟ್ ವಿಫಲ,ಗಗನಯಾತ್ರಿಗಳು ಸುರಕ್ಷಿತ

Update: 2018-10-11 13:33 GMT

ಬೈಕನೂರ್,ಅ.11: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾ ಮತ್ತು ಅಮೆರಿಕದ ಇಬ್ಬರು ಗಗನಯಾತ್ರಿಗಳನ್ನು ಸಾಗಿಸಲಿದ್ದ ಸೋಯುಝ್ ಅಂತರಿಕ್ಷ ನೌಕೆಯನ್ನು ಹೊತ್ತಿದ್ದ ಬೂಸ್ಟರ್ ರಾಕೆಟ್ ಗುರುವಾರ ಬೆಳಿಗ್ಗೆ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ತಾತ್ರಿಕ ದೋಷ ಕಾಣಿಸಿಕೊಂಡು ವಿಫಲಗೊಂಡಿದ್ದು, ಗಗನಯಾತ್ರಿಗಳಾದ ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಿ ಒವ್ಚಿನಿನ್ ಅವರು ಎಮರ್ಜನ್ಸಿ ಲ್ಯಾಂಡಿಂಗ್ ಮಾಡುವ ಮೂಲಕ ಸುರಕ್ಷಿತವಾಗಿ ಪಾರಾಗಿದ್ದಾರೆ.

ಕಝಕಿಸ್ತಾನದ ಬೈಕನೂರ್‌ನಲ್ಲಿರುವ ಸೋವಿಯತ್ ಯುಗದ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್‌ನ್ನು ಉಡಾವಣೆಗೊಳಿಸಲಾಗಿತ್ತು. ಉಡಾವಣೆಯ ಆರಂಭಿಕ ಹಂತದಲ್ಲಿ ಸುಗಮವಾಗಿ ಚಲಿಸಿದ್ದ ರಾಕೆಟ್ ಎತ್ತರವನ್ನು ತಲುಪಿದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಇಬ್ಬರೂ ಗಗನಯಾತ್ರಿಗಳು ಇಳಿದಿದ್ದ ಸ್ಥಳವನ್ನು ಗುರುತಿಸಿ ಅವರನ್ನು ರಕ್ಷಿಸಲಾಗಿದೆ ಎಂದು ರಷ್ಯಾದ ಸುದ್ದಿಸಂಸ್ಥಗಳು ವರದಿ ಮಾಡಿದ್ದು,ನಾಸಾ ಇದನ್ನು ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News