ಉಡುಪಿ: ಆಸ್ಟ್ರೋಮೋಹನ್‌ಗೆ ಪ್ರಶಸ್ತಿ
Update: 2018-10-11 20:23 IST
ಉಡುಪಿ, ಅ.11: ಆಂಧ್ರ ಪ್ರದೇಶ ರಾಜ್ಯ ಛಾಯಾಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇಂಡಿಯನ್ ಪ್ರೆಸ್ ಫೋಟೊಗ್ರಾಫರ್ ಸ್ಪರ್ಧೆಯಲ್ಲಿ ಉಡುಪಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋಮೋಹನ್ ಅವರ ಚಿತ್ರಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ಆಗಮಿಸಿದ್ದ ಸಂದರ್ಭದಲ್ಲಿ ಇವರು ತೆಗೆದ ಈ ಚಿತ್ರಕ್ಕೆ ಮೂರು ಸಾವಿರ ರೂ.ನಗದು ಪುರಸ್ಕಾರ ದೊರೆತಿದೆ.