‘ಉಡುಪಿ ಹೆಲ್ಪ್‌ಲೈನ್’ ಸ್ವಯಂ ಸೇವಾ ಸಂಸ್ಥೆ ಉದ್ಘಾಟನೆ

Update: 2018-10-11 14:55 GMT

ಉಡುಪಿ, ಅ.11: ಶುಭ ಸಮಾರಂಭಗಳಲ್ಲಿ ಹೆಚ್ಚುವರಿಯಾಗಿ ಉಳಿದ ಆಹಾರವನ್ನು ಅಗತ್ಯ ಇರುವವರಿಗೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ‘ಉಡುಪಿ ಹೆಲ್ಪ್‌ಲೈನ್’ ಸ್ವಯಂ ಸೇವಾ ಸಂಸ್ಥೆ ಉದ್ಘಾಟನೆ ಹಾಗೂ ಅಗತ್ಯ ಉಳ್ಳವರಿಗೆ ಆಹಾರ ತಲುಪಿಸುವ ಕಾರ್ಯಕ್ಕೆ ಚಾಲನೆಯನ್ನು ಇಂದು ನಗರದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಹಸಿವು ಎಂಬುದು ಎಲ್ಲರಿಗೂ ಒಂದೇ ಆಗಿದೆ. ಹಸಿವು ನೀಗಿಸುವುದು ಪುಣ್ಯದ ಕೆಲಸ. ಇಂಥ ಕೆಲಸಕ್ಕೆ ಮುಂದಾಗ ಉಡುಪಿ ಹೆಲ್ಫ್‌ಲೈನ್‌ನ ತರುಣ ಉತ್ಸಾಹಿಗಳು ಉಳಿದವರಿಗೆ ಒಳ್ಳೆಯ ಮಾದರಿ ಎನಿಸಿದ್ದಾರೆ ಎಂದರು.

ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರೂ ಈ ಸಂದರ್ಭದಲ್ಲಿ ಮಾತನಾಡಿ, ಹಸಿವು ಮುಕ್ತ ಭಾರತದ ಕನಸು ನನಸಾಗುವಲ್ಲಿ ಇದು ಒಂದು ದಿಟ್ಟ ಹೆಜ್ಜೆಯಾಗಿದೆ ಎಂದರು.

ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ, ಸಮಾರಂಭಗಳಲ್ಲಿ ಬಳಸಿ ಉಳಿಯುವ ಆಹಾರ ಪದಾರ್ಥಗಳನ್ನು ಕಸದ ತೊಟ್ಟಿಗೆ ಎಸೆಯದೇ, ಅದರ ಸದುಪಯೋಗವಾಗುತ್ತಿ ರುವುದು ಆ ಮೂಲಕ ಹಲವರ ಹಸಿವು ನೀಗುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಾನವ್ಯವಸ್ಥಾಪಕಇಂದ್ರಾಳಿಜಯಕರಶೆಟ್ಟಿ,ಸಮಾರಂಗಳಲ್ಲಿ ಬಳಸಿ ಉಳಿಯುವ ಆಹಾರ ಪದಾರ್ಥಗಳನ್ನು ಕಸದ ತೊಟ್ಟಿಗೆ ಎಸೆಯದೇ, ಅದರ ಸದುಪಯೋಗವಾಗುತ್ತಿ ರುವುದು ಆ ಮೂಲಕ ಹಲವರ ಹಸಿವು ನೀಗುವುದು ಒಳ್ಳೆಯ ಕಾರ್ಯವಾಗಿದೆ ಎಂದರು. ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಮನೋಜ್ ಪ್ರಭು, ಉಡುಪಿ ಹೆಲ್ಫ್ ಲೈನ್‌ನ ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ, ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಯಾಣಪುರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವ ರೋಶನ್ ಡಿಸೋಜ, ಟಿ.ಎಸ್.ತನ್ವೀರ್ ಹಾಗೂ ಕೆ.ಎಸ್. ಕಲ್ಕೂರ ಇವರನ್ನು ಸನ್ಮಾನಿಸಲಾಯಿತು.

ಉಡುಪಿ ಹೆಲ್ಫ್‌ಲೈನ್‌ನ ಗೌರವಾಧ್ಯಕ್ಷ ಅಮೃತ ಶೆಣೈ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಖಲೀಲ್ ಸ್ವಾಗತಿಸಿ, ಸಂಸ್ಥೆಯ ಮಾಧ್ಯಮ ಉಸ್ತುವಾರಿ ಸ್ಟೀವನ್ ಕುಲಾಸೋ ಉ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ತಂಡವನ್ನು ಕಟ್ಟಿ ಹೆಚ್ಚುವರಿ ಯಾಗಿ ಉಳಿದ ಆಹಾರನವನ್ನು ಸೂಕ್ತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆಹಾರ ಕೆಡದಂತೆ ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಹಾಗೂ ಅವುಗಳನ್ನು ಸಾಗಿಸಲು ವಾಹನದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸ್ಟಿೀವನ್ ಈ ಸಂದರ್ಭದಲ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News