ಉಡುಪಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ

Update: 2018-10-11 14:57 GMT

ಉಡುಪಿ, ಅ.11: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ದೇಶದ ಎಲ್ಲಾ ನಾಗರಿಕರಿಗೂ ಸೂರು ಒದಗಿಸುವ ಧ್ಯೇಯೋ ದ್ದೇಶದೊಂದಿಗೆ ‘ಹೌಸಿಂಗ್ ಫೋರ್ ಆಲ್-2022’ ಎಂಬ ನೂತನ ಆಭಿಯಾನವನ್ನು ಜಾರಿಗೊಳಿಸಿದೆ.

ನಗರ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತ ಕುಟುಂಬಗಳಿಗೆ 2022ರೊಳಗೆ ವಸತಿ ಸೌಲಭ್ಯ ಒದಗಿಸಲು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯು ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಂ ಎಂಬ ಉಪ ಘಟಕವನ್ನು ಜಾರಿಗೊಳಿಸಿದೆ. ಈ ಯೋಜನೆ ಉದ್ದೇಶ ಗರಿಷ್ಠ 18 ಲಕ್ಷ ರೂ. ಆದಾಯ ಹೊಂದಿರುವವರು ಹೊಸ ಮನೆಯನ್ನು ನಿರ್ಮಿಸಿಕೊಳ್ಳಲು, ಖರೀದಿಸಲು, ರಿಪೇರಿ ಇರುವ ಮನೆಗೆ ಹೆಚ್ಚುವರಿ ಕೊಠಡಿಗಳನ್ನು (ಕೊಠಡಿ, ಅಡುಗೆ ಮನೆ, ಶೌಚಾಲಯ, ಸ್ನಾನದ ಮನೆ) ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಬ್ಯಾಂಕ್ ಸಾಲದ ಸೌಲ್ಯವಿದ್ದು, ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿದರದಲ್ಲಿ ಸಹಾಯಧನ ಒದಗಿಸಲಾಗುತ್ತದೆ.

ವಾರ್ಷಿಕ ಆದಾಯ 3 ಲಕ್ಷದವರೆಗೆ ಕಟ್ಟಡ ವಿಸ್ತೀರ್ಣದ 30 ಚದರ ಮೀ.ವರೆಗೆ ಮನೆ ನಿರ್ಮಿಸಲು 6 ಲಕ್ಷದವರೆಗೆ ಶೇ.6.5 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ ರಿಯಾಯಿತಿಯನ್ನು 2.67 ಲಕ್ಷ ರೂ.ವನ್ನು ನೀಡಲಾಗುವುದು. ವಾರ್ಷಿಕ ಆದಾಯ 6 ಲಕ್ಷದವರೆಗೆ ಕಟ್ಟಡ ವಿಸ್ತೀರ್ಣ 60 ಚದರ ಮೀ.ವರೆಗೆ ಮನೆ ನಿರ್ಮಿಸಲು 6 ಲಕ್ಷದವರೆಗೆ ಶೇ.6.5 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2.67 ಲಕ್ಷ ರಿಯಾಯಿತಿ ನೀಡಲಾಗುವುದು.

ವಾರ್ಷಿಕ ಆದಾಯ 12 ಲಕ್ಷದವರೆಗೆ ಕಟ್ಟಡ ವಿಸ್ತೀರ್ಣ 160 ಚ.ಮೀ. ವರೆಗೆ ಮನೆ ನಿರ್ಮಿಸಲು 9 ಲಕ್ಷದವರೆಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2.35 ಲಕ್ಷ ರಿಯಾಯಿತಿ ನೀಡಲಾಗುವುದು. ವಾರ್ಷಿಕ ಆದಾಯ 18 ಲಕ್ಷದವರೆಗೆ ಕಟ್ಟಡ ವಿಸ್ತೀರ್ಣ 200 ಚ.ಮೀ. ವರೆಗೆ ಮನೆ ನಿರ್ಮಿಸಲು 12 ಲಕ್ಷದವರೆಗೆ ಶೇ.3ರ ಬಡ್ಡಿದರದಲ್ಲಿ ಸಾಲ ನೀಡಲಾ ಗುವುದು. ಬಡ್ಡಿ ದರದಲ್ಲಿ 2.30 ಲಕ್ಷ ರೂ. ರಿಯಾಯಿತಿ ನೀಡಲಾಗುವುದು.

ನಗರ ಪ್ರದೇಶದ ಮಿತಿಯೊಳಗೆ ವಾಸಿಸುವ ಕುಟುಂಬಗಳಷ್ಟೇ ಅಲ್ಲದೇ, ಪ್ಲಾನಿಂಗ್ ಏರಿಯಾ/ಡೆವಲಪ್‌ಮೆಂಟ್ ಏರಿಯಾ/ಸ್ಪೆಷಲ್ ಏರಿಯಾ/ಇಂಡಸ್ಟ್ರೀಯಲ್ ಏರಿಯಾಗಳಲ್ಲಿ ವಾಸಿಸುವ ಕುಟುಂಬಗಳು ಕೂಡಾ ಈ ಯೋಜನೆಯ ಪ್ರಯೊೀಜನ ಪಡೆಯಲು ಅರ್ಹರಾಗಿರುತ್ತವೆ.

ಆದ್ದರಿಂದ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಂ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳಲು ಆಸಕ್ತಿ ಹೊಂದಿರುವವರು ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಉಡುಪಿ ನಗರಸಭೆ (ದೂರವಾಣಿ:9448723833, 9686125791), ಕಾರ್ಕಳ ಪುರಸಭೆ: 9741815079, ಕುಂದಾಪುರ ಪುರಸಭೆ: 9880164369, ಕಾಪು ಪುರಸಭೆ: 9449451584, ಸಾಲಿಗ್ರಾಮ ಪಟ್ಟಣ ಪಂಚಾಯತ್: 9449943882 ಹಾಗೂ -www.pmaymis.gov.in - ಮತ್ತು -https://ashraya.karnataka.gov.in-  ವೆಬ್‌ಸೈಟ್‌ನ್ನು ಸಂಪರ್ಕಿಸುವಂತೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News