ಹಿರಿಯಡಕ: ಶತಾಯುಷಿಯೊಂದಿಗೆ ಸಂವಾದ
ಉಡುಪಿ, ಅ.11: ‘ಮದ್ದಳೆಯ ಮಾಂತ್ರಿಕ’ ಎಂದೇ ಜನಪ್ರಿಯರಾದ ಯಕ್ಷಗಾನದ ಖ್ಯಾತ ಮದ್ದಳೆ ವಾದನ, ಶತಾಯುಷಿ ಹಿರಿಯಡ್ಕ ಗೋಪಾಲ ರಾಯರೊಂದಿಗೆ ಆತ್ಮೀಯವಾದ ಸಂವಾದ ಕಾರ್ಯಕ್ರಮವನ್ನು ಗಾಂಧಿ ಜಯಂತಿಯ ದಿನದಂದು ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾ ಲೇಜಿನ ವಿದ್ಯಾರ್ಥಿಗಳು ನಡೆಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸೇನಾನಿ ಕರ್ನಲ್ ಬಿ.ರಾಮಚಂದ್ರರಾವ್ ಹಾಗೂ ಸಮಾಜ ಸೇವಾ ನಿರತ ಮಾಲತಿ ರಾವ್ ಹಾಗೂ ಗೋಪಾಲರಾವ್ ಇವರನ್ನು ಸನ್ಮಾನಿಸಲಾಯಿತು.
ಸಬ್ ಕೊ ಸನ್ಮತಿ ದೇ ಭಗವಾನ್ ಸಂದೇಶವನ್ನು ನೀಡುತ್ತಾ ಗೋಪಾಲರಾವ್ ಹಿರಿಯಡ್ಕ ಹಾಗೂ ಕರ್ನಲ್ ಬಿ.ರಾಮಚಂದ್ರರಾವ್ ಸಂವಾದ ನಡೆಸಿದರು. ಸ್ವಾತಂತ್ರ ಪೂರ್ವದ ಘಟನೆಗಳನ್ನು ಮೆಲುಕು ಹಾಕಿದರು. ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಕಾಲೇಜಿನ ಐಕ್ಯುಎಸಿ ಸಂಚಾಲಕಿ ಸುಮನಾ ಬಿ. ನಿರ್ವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಆಂಗ್ಲಬಾಷಾ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ಮತ್ತು ಸುಭಾಷ್ ಹೆಚ್.ಕೆ. ಅತಿಥಿಗಳನ್ನು ಪರಿಚಯಿಸಿದರು.