ಬೆಳೆ ಸಮೀಕ್ಷೆ: ಬೆಳೆ ದರ್ಶಕ ನೂತನ ಆ್ಯಪ್ ಬಿಡುಗಡೆ

Update: 2018-10-11 15:01 GMT

ಉಡುಪಿ, ಅ.11: ಉಡುಪಿ ಜಿಲ್ಲೆಯಲ್ಲಿ 2018ರ ಮುಂಗಾರು ಬೆಳೆಯ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ಈ ಕಾರ್ಯಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡುವ ಉದ್ದೇಶದಿಂದ ಸರಕಾರ ‘ಬೆಳೆ ದರ್ಶಕ’ ಎಂಬ ನೂತನ ಆ್ಯಪ್ ಸಾಪ್ಟ್‌ವೇರನ್ನು ಬಿಡುಗಡೆಗೊಳಿಸಿದೆ.

ರೈತರು ಈ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು 2018ರ ಮುಂಗಾರು ಬೆಳೆ ಸಮೀಕ್ಷೆ ಕಾರ್ಯದ ಮಾಹಿತಿ ಯನ್ನು ಪಡೆದುಕೊಳ್ಳಬಹುದು. ಈ ಸಾಪ್ಟ್‌ವೇರ್‌ನಲ್ಲಿ ರೈತರು ತಮ್ಮ ವ್ಯಾಪ್ತಿಯ ಬೆಳೆ ಸಮೀಕ್ಷೆಗೆ ಬರುವ ಸಿಬ್ಬಂದಿಗಳ ಮಾಹಿತಿಯನ್ನು ಹಾಗೂ ತಮ್ಮ ಜಮೀನಿನ ಬೆಳೆ ಸಮೀಕ್ಷೆ ನಡೆದಿದೆಯೇ ಎಂಬ ಮಾಹಿತಿಯನ್ನು ಸಹ ಪಡೆಯ ಬಹುದಾಗಿದೆ.

ರೈತರು ಈ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು 2018ರ ಮುಂಗಾರು ಬೆಳೆ ಸಮೀಕ್ಷೆ ಕಾರ್ಯದ ಮಾಹಿತಿ ಯನ್ನು ಪಡೆದುಕೊಳ್ಳಬಹುದು. ಈ ಸಾಪ್ಟ್‌ವೇರ್‌ನಲ್ಲಿ ರೈತರು ತಮ್ಮ ವ್ಯಾಪ್ತಿಯ ಬೆಳೆ ಸಮೀಕ್ಷೆಗೆ ಬರುವ ಸಿಬ್ಬಂದಿಗಳ ಮಾಹಿತಿಯನ್ನು ಹಾಗೂ ತಮ್ಮ ಜಮೀನಿನ ಬೆಳೆ ಸಮೀಕ್ಷೆ ನಡೆದಿದೆಯೇ ಎಂಬ ಮಾಹಿತಿಯನ್ನು ಸಹ ಪಡೆಯ ಬಹುದಾಗಿದೆ. ಹೀಗಾಗಿ ರೈತರು ತಮ್ಮ ಜಮೀನು ವ್ಯಾಪ್ತಿಯ ಬೆಳೆ ಸಮೀಕ್ಷೆ ಸಿಬ್ಬಂದಿಯನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ ಕಾರ್ಯ ನಡೆಸುವಂತೆ ಕೋರಬಹುದು ಮತ್ತು ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾದ ಬೆಳೆ ವಿವರ ಹಾಗೂ ಬೆಳೆಯ ಪೋಟೊಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಅಲ್ಲದೇ ತಪ್ಪುಗಳು ಕಂಡು ಬಂದ ಸಂದರ್ಭದಲ್ಲಿ ನೇರವಾಗಿ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ ದಾಖಲಾದ ಮಾಹಿತಿಯನ್ನು ಸರಿಪಡಿಸಿ ಕೊಳ್ಳಬಹುದಾಗಿದೆ.

ಆದುದರಿಂದ ರೈತರು ಈ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News