ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್

Update: 2018-10-11 15:25 GMT

ಮಂಗಳೂರು, ಅ. 11: ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಪ್ರತಿದಿನ ಸಂಜೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಆಯೋಜಿಸುವ ಕಾರುಣ್ಯ ಯೋಜನೆಗೆ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು ಗುರುವಾರ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.

ವೆನ್ಲಾಕ್ ಆಸ್ಪತ್ರೆಯ ಸುಮಾರು 500 ಮಂದಿ ರೋಗಿಗಳ ಜೊತೆಗಾರರಿಗೆ ಪ್ರತಿದಿನ ಊಟ ನೀಡುತ್ತಿರುವುದು ಸಣ್ಣ ಕೆಲಸವಲ್ಲ. ಶುಚಿ, ರುಚಿಯಾದ ತಿಂಡಿ ನೀಡಿ ಮಹತ್ಕಾರ್ಯದಲ್ಲಿ ತೊಡಗಿರುವ ಎಂ.ಫ್ರೆಂಡ್ಸ್ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹೇಳಿದರು.

ವೆನ್ಲಾಕ್ ಆಸ್ಪತ್ರೆ ಡಿಎಂಒ ಡಾ. ರಾಜೇಶ್ವರಿ ದೇವಿ, ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ರಸ್ಟಿ ಹಮೀದ್ ಅತ್ತೂರು, ಉದ್ಯಮಿ ಅನ್ಸಾರ್ ಕಂಡತ್ ಪಳ್ಳಿ, ರೋಶನಿ ನಿಲಯದ ವಿದ್ಯಾರ್ಥಿನಿ ರೀಮಾ ಗೋಳ್ತಮಜಲು ಮತ್ತು ವಿದ್ಯಾರ್ಥಿನಿಯರ ತಂಡ, ಯುವಕಾಂಗ್ರೆಸ್ ನ ಸೌಹಾನ್, ಅಶ್ಫಾಕ್ ಉಳ್ಳಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News