ಕಾಳವಾರದಲ್ಲಿ ಭೂ ಅತಿಕ್ರಮಣ; ಆರೋಪ

Update: 2018-10-11 16:24 GMT

ಉಡುಪಿ, ಅ.11: ಕಾಳವಾರ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಬೆಟ್ಟು ಪ್ರದೇಶದಲ್ಲಿ ಒಂದೇ ಕುಟುಂಬ 7 ಮಂದಿ ಕುಮ್ಕಿ ಜಾಗವನ್ನು ಅತಿಕ್ರಮಿಸಿಕೊಂಡು 94ಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ, ಭೂ ಕಬಳಿಕೆ ಮಾಡಲು ಯತ್ನಿಸುತ್ತಿದ್ದಾರೆ. ಕುಂದಾಪುರ ತಹಶೀಲ್ದಾರ್ ಮನೆಗಳನ್ನು ತೆರವು ಮಾಡಲು ಆದೇಶ ನೀಡಿದ್ದರೂ, ಈವರೆಗೆ ಆದೇಶ ಅನುಷ್ಠಾನಗೊಂಡಿಲ್ಲ ಎಂದು ಕಾಳಾವರದ ಅಶ್ವಥ್ ದೇವಾಡಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಳವಾರ ಗ್ರಾಮದ ಸ.ನಂ. 111ರಲ್ಲಿ 11.75 ಎಕ್ರೆ ಸರಕಾರಿ ಜಾಗವಿದ್ದು, ಇದರಲ್ಲಿ 1 ಎಕ್ರೆ ಪ್ರದೇಶದಲ್ಲಿ ಅಕ್ಷತಾ ಶೆಟ್ಟಿ, ಶ್ಯಾಮಲಾ ಶೆಟ್ಟಿ ಮೊದಲಾದವರು ಮನೆಗಳನ್ನು ನಿರ್ಮಿಸಿದ್ದು, ಇದು ಅನಧಿಕೃತವಾಗಿದೆ. ತೆರವು ಮಾಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಈ ಶೆಡ್‌ಗಳಿಗೆ ಗ್ರಾಪಂ ವಾಸ್ತವ್ಯ ದೃಢೀಕರಣ ಪತ್ರವನ್ನೂ ನೀಡಿಲ್ಲ. ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಾಗಿರುವುದು ಕಂದಾಯ ಅಧಿಕಾರಿಗಳ ವರದಿಯಿಂದ ಸಾಬೀತಾಗಿದೆ ಎಂದವರು ತಿಳಿಸಿದರು.

ಕಾಳವಾರ ಗ್ರಾಮದ ಸ.ನಂ. 111ರಲ್ಲಿ 11.75 ಎಕ್ರೆ ಸರಕಾರಿ ಜಾಗವಿದ್ದು, ಇದರಲ್ಲಿ 1 ಎಕ್ರೆ ಪ್ರದೇಶದಲ್ಲಿ ಅಕ್ಷತಾ ಶೆಟ್ಟಿ, ಶ್ಯಾಮಲಾ ಶೆಟ್ಟಿ ಮೊದಲಾದವರು ಮನೆಗಳನ್ನು ನಿರ್ಮಿಸಿದ್ದು, ಇದು ಅನಧಿಕೃತವಾಗಿದೆ. ತೆರವು ಮಾಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಈ ಶೆಡ್‌ಗಳಿಗೆ ಗ್ರಾಪಂ ವಾಸ್ತವ್ಯ ದೃಢೀಕರಣ ಪತ್ರವನ್ನೂ ನೀಡಿಲ್ಲ. ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಾಗಿರುವುದು ಕಂದಾಯ ಅಧಿಕಾರಿಗಳ ವರದಿಯಿಂದ ಸಾಬೀತಾಗಿದೆ ಎಂದವರು ತಿಳಿಸಿದರು. ಸ.ನಂ.11ರಲ್ಲಿ ಹೊಂದಿಕೊಂಡು ತಮ್ಮ ಜಾಗವಿದ್ದು, ಈ ಜಾಗವು ನಮಗೆ ಸೇರಿದ ಕುಮ್ಕಿ ಜಾಗವಾಗಿದೆ. ದೇವಸ್ಥಾನದಿಂದ ನಮಗೆ ದೊರೆತ ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಈ ಸುಮಾರು ಒಂದು ಎಕರೆ ಪ್ರದೇಶ ಕುಮ್ಕಿ ಜಾಗವಾಗಿದ್ದು, ನಾವಿದ್ದನ್ನು ಮಳೆಗಾಲದ ನೆರೆ ಸಂದರ್ಭದಲ್ಲಿ ಸೇರಿದಂತೆ ವಿವಿಧ ಉದ್ದೇಶಗಳಿಗೆ 100 ವರ್ಷಕ್ಕೂ ಅಧಿಕ ಸಮಯದಿಂದ ಉಪಯೋಗಿಸುತಿದ್ದೇವೆ ಎಂದು ಅಶ್ವಥ್ ತಿಳಿಸಿದರು.

ಸ್ಥಳೀಯರಾದ ರತ್ನಾಕರ ದೇವಾಡಿಗ, ಶ್ವೇತಾ ದೇವಾಡಿಗ, ಇಂದಿರಾ ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News