ನಿಕ್ಕಿ ಹೇಲಿ ಖಾಸಗಿ ಕ್ಷೇತ್ರದಲ್ಲಿ ಒಳ್ಳೆ ಹಣ ಮಾಡುತ್ತಾರೆ: ಟ್ರಂಪ್

Update: 2018-10-11 16:46 GMT

ವಾಶಿಂಗ್ಟನ್, ಅ. 11: ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿ ನಿಕ್ಕಿ ಹೇಲಿ ಓರ್ವ ‘ಅಸಾಧಾರಣ ವ್ಯಕ್ತಿ’ ಎಂಬುದಾಗಿ ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಖಾಸಗಿ ಕ್ಷೇತ್ರದಲ್ಲಿ ‘ಬೇಕಾದಷ್ಟು ಹಣ ಮಾಡುವ ಸಾಮರ್ಥ್ಯ’ವನ್ನು ಹೊಂದಿದ್ದಾರೆ ಎಂದಿದ್ದಾರೆ.

 46 ವರ್ಷದ ಹೇಲಿ, ಅಮೆರಿಕದ ಸರಕಾರವೊಂದರಲ್ಲಿ ಕ್ಯಾಬಿನೆಟ್ ದರ್ಜೆಯ ಹುದ್ದೆಯನ್ನು ವಹಿಸಿದ ಪ್ರಥಮ ಭಾರತೀಯ-ಅಮೆರಿಕನ್ ಆಗಿದ್ದಾರೆ. ಅವರು ಮಂಗಳವಾರ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಹಾಗೂ ಈ ವರ್ಷದ ಕೊನೆಯಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಅವರು 6 ವರ್ಷ ಸೌತ್ ಕರೋಲಿನ ಗವರ್ನರ್ ಆಗಿದ್ದರು. ಎರಡು ವರ್ಷ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ಬಳಿಕ, ಖಾಸಗಿ ಕ್ಷೇತ್ರಕ್ಕೆ ಹೋಗುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News