ಸಾಹಿತ್ಯ ಪ್ರಸ್ತುತಿಗೆ ಕವನ-ಬರೆಹಗಳ ಆಹ್ವಾನ

Update: 2018-10-11 17:28 GMT

ಬಂಟ್ವಾಳ, ಅ. 11: ಫರಂಗಿಪೇಟೆ ಸೇವಾಂಜಲಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಸಾಹಿತ್ಯ ಪ್ರಸ್ತುತಿ" ಎಂಬ ಗೋಷ್ಠಿ ಏರ್ಪಡಿಸಲಾಗಿದೆ.

ಇದರಲ್ಲಿ ಭಾಗವಹಿಸಲು ಇಚ್ಛಿಸುವ ಬಂಟ್ವಾಳ ತಾಲೂಕಿನ ಹಿರಿ-ಕಿರಿಯ ಆಸಕ್ತ ಕವಿ-ಸಾಹಿತಿಗಳು ತಮ್ಮ ಸ್ವರಚಿತ ಕಥೆ, ಕವನ, ಚುಟುಕು/ಹನಿಕವನ ಇತ್ಯಾದಿ ಸಾಹಿತ್ಯ ಪ್ರಕಾರ ಗಳನ್ನು ಕಳುಹಿಸಿ ಕೊಡಲು ಕೋರಲಾಗಿದೆ.

ತಾವು ಕಳುಹಿಸುವ ಗದ್ಯ ಬರೆಹ ಎರಡು ಪುಟಗಳ ಮಿತಿಯಲ್ಲಿರಲಿ. ಕವನ/ಭಾವಗೀತೆಗಳಾದರೆ ಒಂದು ಪುಟದ ಒಳಗಿರಬೇಕು. ನಾಲ್ಕರಿಂದ ಆರು ಸಾಲುಗಳ ಚುಟುಕು ಅಥವಾ ಹನಿಕವನಗಳನ್ನು ಕಳುಹಿಸಿ ಕೊಡಬಹುದು.

ಆಯ್ಕೆ ಯಾದ ರಚನೆಗಳನ್ನು ಸಾಹಿತ್ಯ ಪ್ರಸ್ತುತಿ ಗೋಷ್ಠಿಯಲ್ಲಿ ವಾಚಿಸಲು ಅವಕಾಶ ಕಲ್ಪಿಸಲಾಗುವುದು. ಯಾವುದೆ ಪ್ರಕಾರದ ರಚನೆಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಸ್ಫುಟವಾಗಿ ಬರೆದು ತಮ್ಮ ದೂರವಾಣಿ ಸಂಖ್ಯೆ ಹಾಗು ವಿಳಾಸದೊಂದಿಗೆ ಅ. 28ರೊಳಗೆ ಕಳುಹಿಸಿ ಕೊಡಬೇಕು.

ವಿಳಾಸ: ಅಧ್ಯಕ್ಷರು/ಕಾರ್ಯ ದರ್ಶಿ, ಸ್ವಾಗತ ಸಮಿತಿ, ಬಂಟ್ವಾಳ ತಾಲೂಕು 19ನೆ ಕನ್ನಡ ಸಾಹಿತ್ಯ ಸಮ್ಮೇಳನ, ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ-574143, ಬಂಟ್ವಾಳ ತಾಲೂಕು, ದ.ಕ . ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9483903306 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News