ಕೇರಳ: ಎರಡು ಎಟಿಎಮ್‌ಗಳಿಂದ 35 ಲ.ರೂ.ದೋಚಿದ ಕಳ್ಳರು

Update: 2018-10-12 13:06 GMT

ಕೊಚ್ಚಿ/ತ್ರಿಶೂರು,ಅ.12: ಶುಕ್ರವಾರ ಬೆಳಗಿನ ಜಾವ ತ್ರಿಶೂರು ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿಯ ಎರಡು ಎಟಿಎಂ ಯಂತ್ರಗಳನ್ನು ಒಡೆದ ಕಳ್ಳರು 35 ಲ.ರೂ.ಗಳನ್ನು ದೋಚಿದ್ದಾರೆ. ಇವೆರಡೂ ಕಳ್ಳತನಗಳಲ್ಲಿ ಒಂದೇ ತಂಡದ ಕೈವಾಡವನ್ನು ಪೊಲೀಸರು ಶಂಕಿಸಿದ್ದಾರೆ.

ಮೊದಲ ಘಟನೆ ಎರ್ನಾಕುಳಂ ಜಿಲ್ಲೆಯ ತ್ರಿಪುನ್ನಿತ್ತುರದ ಇರುಂಬನಂ ಎಂಬಲ್ಲಿ ನಸುಕಿನ 3:30ರ ಸುಮಾರಿಗೆ ನಡೆದಿದೆ. ಗ್ಯಾಸ್ ಕಟರ್ ಬಳಸಿ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂ ಯಂತ್ರವನ್ನು ತೆರೆದ ಕಳ್ಳರು 25 ಲ.ರೂ.ಗಳನ್ನು ಎಗರಿಸಿದ್ದಾರೆ. ನಂತರ 4:30ರ ಸುಮಾರಿಗೆ ತ್ರಿಶೂರು ಜಿಲ್ಲೆಯ ಕೊರಟ್ಟಿಯಲ್ಲಿ ಖಾಸಗಿ ಬ್ಯಾಂಕೊಂದರ ಎಟಿಎಂ ಯಂತ್ರವನ್ನು ಇದೇ ರೀತಿ ತೆರೆದು 10 ಲ.ರೂ.ಗಳನ್ನು ದೋಚಿ ಶಟರ್ ಎಳೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೃತ್ಯವನ್ನು ಎಸಗುವ ಮುನ್ನ ಕಳ್ಳರು ಸಿಸಿಟಿವಿ ಕ್ಯಾಮೆರಾಕ್ಕೆ ಬಣ್ಣ ಸಿಂಪಡಿಸಿದ್ದು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News