ಉಪವಾಸ ಮುಷ್ಕರ ಕೈಬಿಟ್ಟ ಪ್ರೆಸಿಡೆನ್ಸಿ ವಿವಿ ವಿದ್ಯಾರ್ಥಿಗಳು

Update: 2018-10-12 13:19 GMT

 ಕೋಲ್ಕತಾ,ಅ.12: ಇಲ್ಲಿಯ ಪ್ರೆಸಿಡೆನ್ಸಿ ವಿವಿಯ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಈಡನ್ ಹಿಂದು ಹಾಸ್ಟೆಲ್‌ನಲ್ಲಿ ತಮಗೆ ವಸತಿ ಸೌಲಭ್ಯವನ್ನು ಒದಗಿಸುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ 10 ದಿನಗಳ ಉಪವಾಸ ಮುಷ್ಕರವನ್ನು ಕೈಬಿಟ್ಟಿದ್ದಾರೆ. ವಿದ್ಯಾರ್ಥಿಗಳು ಕಳೆದ ಆಗಸ್ಟ್ ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.

ಹಾಸ್ಟೆಲ್‌ನ ನವೀಕರಣ ಕಾರ್ಯ ನಡೆಯುತ್ತಿದ್ದು,ಅದು ಬಳಕೆಗೆ ಸುರಕ್ಷಿತ ಎನ್ನುವುದು ಸಾಬೀತಾದ ಬಳಿಕ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ನ.15ರಿಂದ ಹಾಸ್ಟೆಲ್ ಕೋಣೆಗಳನ್ನು ಲಭ್ಯವಾಗಿಸುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರ ವಕ್ತಾರ ಸಯನ್ ಚಕ್ರವರ್ತಿ ತಿಳಿಸಿದರು.

ಪ್ರತಿಭಟನೆಯ ಅವಧಿಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News