×
Ad

ಪ್ರಕರಣದಲ್ಲಿ ಶಿಕ್ಷೆಯಾಗಿದ್ದ ಆರೋಪಿ 10 ವರ್ಷದ ನಂತರ ಬಂಧನ

Update: 2018-10-12 19:05 IST

ಮಂಗಳೂರು, ಅ.12: ಪಣಂಣೂರು ಗ್ರಾಮದ ಎಸ್ಟೀನ್ ಹಾಲ್ ಗೋದಾಮು ಬಳಿ ಅಪಘಾತ ಎಸಗಿದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದ ಆರೋಪಿ ತಲೆಮರೆಸಿಕೊಂಡಿದ್ದು, 10 ವರ್ಷದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಬಂಟ್ವಾಳ ನರಿಂಗಾಣ ತೌಡುಗೋಳಿಯವನಾಗಿದ್ದು, ಪ್ರಸ್ತುತ ಮೂಡುಬಿದಿರೆ ಮುರಾಬೈಲು, ಕೋಟೆಬಾಗಿಲು ನಿವಾಸಿ ರಾಜೇಶ್ (48)ಬಂಧಿತ ಆರೋಪಿ.

2007ರಲ್ಲಿ ನಡೆದ ಮಾರಣಾಂತಿಕ ರಸ್ತೆ ಅಪಘಾತ ಎಸಗಿದ ಚಾಲಕ ರಾಜೇಶ್ ಗೆ 2008 ಎ.4ರಂದು ನ್ಯಾಯಾಲಯ ಸಜೆಯನ್ನು ವಿಧಿಸಿತ್ತು. ನ್ಯಾಯಾಲಯದ ತೀರ್ಪಿನ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಈತನ ಬಂಧನದ ಬಗ್ಗೆ ವಾರಂಟ್ ಹೊರಡಿಸಿದಂತೆ ವಿಳಾಸ ಬದಲಾಯಿಸಿ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ ತಂಡ ರಚಿಸಿ ಆರೋಪಿಯನ್ನು ಬಂಧಿಸಿ ಅ.12ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಣಂಬೂರು ಪಿಎಸ್ಸೈ ಉಮೇಶ್‌ಕುಮಾರ್ ಎಂ.ಎನ್ ಹಾಗೂ ವಾರೆಂಟ್ ಸಿಬ್ಬಂದಿ ಶೈಲೇಂದ್ರ ಕೆ. ಮತ್ತು ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News