ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆ ಬೋಗಸ್: ಐವನ್ ಡಿಸೋಜಾ

Update: 2018-10-12 14:58 GMT

ಮಂಗಳೂರು, ಅ.12: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಮಾರ್ಟ್‌ಸಿಟಿ ಯೋಜನೆ ಎಂಬುದು ಬೋಗಸ್. ಖಾಸಗಿ ಕಂಪನಿಗಳಿಗೆ ಅನುಕೂಲ ಕಲ್ಪಿಸಲು ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪುನರ್ ವಿಮರ್ಶೆ ನಡೆಯಬೇಕು. ಸ್ಮಾರ್ಟ್‌ಸಿಟಿ ಎಂದರೆ, ಬಸ್ಟೇಂಡ್, ಶೌಚಾಲಯ, ಫುಟ್‌ಪಾತ್, ದಾರಿದೀಪ ನಿರ್ಮಿಸುವುದಲ್ಲ. ಅದಕ್ಕಿಂತಲೂ ಮಿಗಿಲಾಗಿ ನಗರವನ್ನು ಸ್ಮಾರ್ಟ್ ಆಗಿ ಅಭಿವದ್ಧಿಪಡಿಸಲು ಏನೆಲ್ಲ ಯೋಜನೆಗಳು ಬೇಕು ಎಂಬುದನ್ನು ನಿರ್ಧರಿಸಿ ಜಾರಿಗೆ ತರಬೇಕು ಎಂದರು.

ಮಂಗಳೂರಿನಲ್ಲಿ 2,000 ಕೋಟಿ ರೂ. ಅನುದಾನವನ್ನು ಸ್ಮಾರ್ಟ್‌ಸಿಟಿ ಅಭಿವದ್ಧಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಅರ್ಧ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಈ ಹಿಂದೆ ನಾಗರಿಕರಿಂದ ಅಭಿಪ್ರಾಯಗಳನ್ನು ಆಲಿಸಿ ಸ್ಮಾರ್ಟ್‌ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ ಈಗ ಜನಪ್ರತಿನಿಗಳ ಗಮನಕ್ಕೆ ಬಾರದೆ ಏಕಾಏಕಿ ಸ್ಮಾರ್ಟ್‌ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದಾಗಿ ನಾಗರಿಕರು ಜನಪ್ರತಿನಿಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಸಮಿತಿಯಲ್ಲಿ ಜನಪ್ರತಿನಿಧಿಗಳಿಗೂ ಪ್ರಾಧಾನ್ಯತೆ ನೀಡುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಕುದ್ರೋಳಿ ಕಸಾಯಿಖಾನೆಯನ್ನು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಯಲ್ಲಿ ಅಭಿವದ್ಧಿಪಡಿಸುವ ಪ್ರಸ್ತಾಪ ಇತ್ತು. ನಂತರ ಸ್ಮಾರ್ಟ್‌ಸಿಟಿ ಬಂದ ಕಾರಣ ಅನುಷ್ಠಾನ ಆಗಿರಲಿಲ್ಲ. ಈಗ ಸ್ವಚ್ಛತೆ ಸಲುವಾಗಿ ಕಸಾಯಿಖಾನೆಯನ್ನು 15 ಕೋಟಿ ರೂ.ಗಳಲ್ಲಿ ಅಭಿವದ್ಧಿಪಡಿಸಲು ಉದ್ದೇಶಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೀಡಿದ ಪ್ರಸ್ತಾವನೆಗೆ ಸ್ಮಾರ್ಟ್‌ಸಿಟಿ ಬೋರ್ಡ್ ಒಪ್ಪಿಗೆ ನೀಡಿದೆ. ಇದನ್ನು ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಅವರದ್ದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಅವರು ದೂರಿದರು.

ಪರಿಹಾರಧನದ ಚೆಕ್ ವಿತರಣೆ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಾರಸಿನಂತೆ ಐದು ಮಂದಿ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಯಿಂದ ಒಟ್ಟು 296128 ರೂ. ಪರಿಹಾರ ಧನದ ಚೆಕ್‌ನ್ನು ಶುಕ್ರವಾರ ವಿತರಿಸಲಾಯಿತು.

ಸುಧೀರ್ ಸಾಲ್ಯಾನ್ ಕೋಡಿಕಲ್ ಅವರಿಗೆ 1,50,000 ರೂ., ರಾಜೀವ ಎಂ. ಕೋಟ್ಯಾನ್ ಸೆಂಟ್ರಲ್ ಮಾರ್ಕೆಟ್ ಅವರಿಗೆ 62497 ರೂ., ದೀಕ್ಷಾ ಬಂಟ್ವಾಳ ಅವರಿಗೆ 31,118 ರೂ., ಸಬೀರಾ ಕಾಪು ಅವರಿಗೆ 28212 ರೂ., ಅಮೀನಾ ಅಡ್ಯಾರು ಅವರಿಗೆ 24301ಅವರಿಗೆ 24301 ರೂ. ಮೊತ್ತದ ಪರಿಹಾರ ಚೆಕ್‌ನ್ನು ನಗರದ ಮನಪಾ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News