ಅಂತಾರಾಷ್ಟ್ರೀಯ ಸ್ಕೇಟಿಂಗ್‌ನಲ್ಲಿ ಪದಕ

Update: 2018-10-12 14:07 GMT

ಮಂಗಳೂರು, ಅ.12: ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಮಹೇಶ್ ಅವರು ಕಳೆದ ಸೆಪ್ಟಂಬರ್‌ನಲ್ಲಿ ಫಿಲಿಪ್ಪೆನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ನಲ್ಲಿ ರಿಲೇ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವುದರ ಜೊತೆಗೆ 500, 1,000 ಮತ್ತು 1,500 ಮೀ. ಗಳಲ್ಲಿ 3 ಬೆಳ್ಳಿಯ ಪದಕ ಗಳಿಸಿದ್ದಾರೆ.

ಶ್ರವಣ್ ಮಹೇಶ್ ನಗರದ ಖ್ಯಾತ ಸ್ಕೇಟಿಂಗ್ ಕೋಚ್ ಮಹೇಶ್ ಅವರ ಪುತ್ರ. ಅವರ ಸಹೋದರಿ ಶರಣ್ಯಾ ಮಹೇಶ್ ಕೂಡ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಸ್ಕೇಟಿಂಗ್ ಚಾಂಪಿಯನ್ ಆಗಿದ್ದಾರೆ. 2010ರಲ್ಲಿ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News