ವಿದ್ಯಾರ್ಥಿಗಳು ವ್ಯಾಟ್ಸ್ಆ್ಯಪ್, ಫೇಸ್‍ಬುಕ್‍ನ ಲೋಕದಿಂದ ಹೊರಬರಲಿ: ಜಗನ್ನಾಥ ಚೌಟ

Update: 2018-10-12 14:16 GMT

ಬಂಟ್ವಾಳ, ಅ. 12: ವಿದ್ಯಾರ್ಥಿಗಳು ವ್ಯಾಟ್ಸ್ಆ್ಯಪ್, ಫೇಸ್‍ಬುಕ್‍ನ ಲೋಕದಿಂದ ಹೊರಬಂದು ಪುಸ್ತಕ ಓದುವುದು ಅಭ್ಯಾಸ ಮಾಡಿ ಎಂದು ಮಂಗಳೂರು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಟ್ರಸ್ಟಿ ಜಗನ್ನಾಥ ಚೌಟ ಹೇಳಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಬೆಂಜನಪದವು ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಪೆರಾಜೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಆಯೋಜಿಸಿದ "ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು" ಎಂಬ ವಿಷಯದಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಮೇಲೆ ಗಮನಹರಿಸಿ, ಜ್ಞಾನ ವೃದ್ಧಿಗಾಗಿ ಓದುವ ಹವ್ಯಾಸ ಬೆಳೆಸಿ ಎಂದರು. ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕುವ ಕಲೆಯನ್ನು ಕಲಿತುಕೊಳ್ಳಿ, ಗುರು ಹಿರಿಯರನ್ನು ಗೌರವಿಸಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಂಜೀವ ಎಚ್ ವಹಿಸಿದ್ದರು. ವೇದಿಕೆಯಲ್ಲಿ ಪೆರಾಜೆ ಗ್ರಾಪಂ ಪಿಡಿಒ ಶಂಭು ಕುಮಾರ್ ಶರ್ಮಾ, ಪಾಣೆಮಂಗಳೂರು ಅನುದಾನಿತ ಶಾಲೆಯ ಶಿಕ್ಷಕ ರಾಜೇಂದ್ರ ಗೌಡ, ಮಾಣಿ ಹಿ.ಪ್ರಾ. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜನಾರ್ದನ ಪೆರಾಜೆ, ಪತ್ರಕರ್ತ ಕಿಶೋರ್ ಪೆರಾಜೆ, ಪ್ರಾಂಶುಪಾಲ ಎ.ಟಿ.ಗಿರೀಶ್ಚಂದ್ರ, ಶಿಬಿರದ ಅಧಿಕಾರಿ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News