ಉಳ್ಳಾಲ: ಮೂರನೇ ದಿನಕ್ಕೆ ಮುಂದುವರಿದ ಕಡಲಬ್ಬರ

Update: 2018-10-12 15:48 GMT

ಉಳ್ಳಾಲ, ಅ. 12: ಚಂಡಮಾರುತದ ಪ್ರಭಾವದಿಂದ ಕಳೆದ ಮೂರು ದಿನಗಳಿಂದ ಉಳ್ಳಾಲದಲ್ಲಿ ಸಮುದ್ರ ಬಿರುಸು ಮುಂದುವರೆದಿದ್ದು ಶುಕ್ರವಾರ ಸಮುದ್ರದ ಅಲೆಗೆ ಭಾಗಶ: ಹಾನಿಯಾಗಿದ್ದ ಝೊಹರಾ ರಹೀಮ್ ಎಂಬವರ ಮನೆ ಸಂಪೂರ್ಣ ಹಾನಿಯಾದರೆ, 47 ಮನೆಗಳ ಅತ್ಯಂತ ಅಪಾಯದಲ್ಲಿರು ಮನೆಗಳೆಂದು ಗುರುತಿಸಲಾಗಿದೆ.

ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್‌ನಗರದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಕೈಕೋದಲ್ಲಿ ಝೋಹರಾ ರಹೀಮ್ ಅವರ ಮೆನ ಸಂಪೂರ್ಣ ಸಮುದ್ರ ಪಾಲಾಗಿದೆ. ಸೋಮೇಶ್ವರ ಉಚ್ಚಿಲದ ಪೆರಿಬೈಲ ಪ್ರದೇಶದಲ್ಲೂ ಸಮುದ್ರದ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿದ್ದು, ಸ್ಥಳೀಯ ಮೂರು ಮನೆಗಳು ಹಾನಿಯಾಗಿದೆ.

ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರ ಉಬ್ಬರದ ಸಂದರ್ಭದಲ್ಲಿ ಸಮುದ್ರದ ಅಲೆಗಳು ಬಿರುಸುಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅಲೆಗಳು ಮನೆಗೆ ಅಪ್ಪಳಿಸುತ್ತಿದೆ. ಶುಕ್ರವಾರವೂ ಬೆಳಗ್ಗಿನ ಸಂದರ್ಭ, ಮಧ್ಯಾಹ್ನ3 ಗಂಟೆವೆರೆಗ ಮತ್ತು ತಡರಾತ್ರಿ ಸಮುದ್ರದ ಅಲೆಗಳು ಮನೆಗೆ ಅಪ್ಪಳಿಸುತ್ತಿದ್ದು, ಗುರುವಾರ ತಡರಾತ್ರಿ ಕೈಕೋ ಇಂದಿರಾನಗರದಲ್ಲಿ 6 ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿದ್ದು ಜನರು ಮನೆಗಳಿಂದ ಹೊರ ಓಡಿ ಬಂದಿದ್ದರು.

ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್‌ನಗರದಲ್ಲಿ ಸಮುದ್ರ ತಟದ 167 ಮನೆಗಳಲ್ಲಿ 47 ಮನೆಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಿ ಆ ಮನೆಗಳ ನಿವಾಸಿಗಳನ್ನು ಇಂತಹ ಸಂದರ್ಭದಲ್ಲಿ ಮನೆ ಖಾಲಿ ಮಾಡಿಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಮೊದಲೇ ಸೂಚಿಸಲಾಗಿತ್ತು. ಎಂದು ನಗರಸಭಾ ಪೌರಾಯಕ್ತೆ ವಾಣಿ ಆಳ್ವ ಮಾಹಿತಿ ನೀಡಿದರು. ಈಗಾಗಲೇ ಹೆಚ್ಚಿನ ಮನೆಗಳಿಂದ ಸ್ಥಳೀಯ ಮತ್ತು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದರು.

ಕಡಲ್ಕೊರೆತ ಮತ್ತು ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾನಗರದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜಾತ್ಯಾತೀತ ಜನತಾದಳದ ಉಳ್ಳಾಲ ವಿಧಾನ ಸಭಾ ಕ್ಷೇತ್ರದಿಂದ ನಿಯೋಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಯು ಎಚ್ ಫಾರೂಕ್ ನಝೀರ್ ಉಳ್ಳಾಲ್, ಅಶ್ರಫ್ ಬಾವ ಕೋಡಿ, ಮುಹಮ್ಮದ್ ಬಶೀರ್ ಕೈಕೋ , ಎವೆರಸ್ಟ್ ಮುಸ್ತಾಫ ಸೇರಿದಂತೆ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News