ನೆರೆ ಸಂತ್ರಸ್ತ ಕೇರಳದ ಪರಿಹಾರ ಕಾರ್ಯಾಚರಣೆಗೆ 102 ಜನಪ್ರತಿನಿಧಿಗಳಿಂದ 43.67 ಕೋ. ರೂ. ದೇಣಿಗೆ

Update: 2018-10-12 16:05 GMT

ಹೊಸದಿಲ್ಲಿ, ಅ. 12: ನೆರೆ ಪೀಡಿತ ಕೇರಳಕ್ಕೆ 102ಕ್ಕೂ ಅಧಿಕ ಶಾಸಕರು ತಮ್ಮ ಎಂಪಿಎಲ್‌ಎಡಿಎಸ್ ನಿಧಿಯಿಂದ ಒಟ್ಟು 43.67 ಕೋ. ರೂ. ನೆರವು ನೀಡಿದ್ದಾರೆ ಎಂದು ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

 ನೆರೆ ಪೀಡಿತ ಕೇರಳದ ಪರಿಹಾರ ಕಾರ್ಯಾಚರಣೆಗೆ ರಾಜ್ಯಸಭೆಯ 56 ಸದಸ್ಯರು 29.57 ಕೋ. ರೂ. ಹಾಗೂ 46 ಲೋಕಸಭಾ ಸದಸ್ಯರು 14.10 ಕೋ. ರೂ. ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆಗೆ 102 ಸಂಸದರು ತಮ್ಮ ಎಂಪಿಎಲ್‌ಎಡಿಎಸ್ ನಿಧಿಯಿಂದ 43.67 ಕೋ. ರೂ. ನೀಡಿದ್ದಾರೆ ಎಂದು ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ವಿಭಾಗ ಎಂಪಿಎಲ್‌ಎಡಿಎಸ್ ದತ್ತಾಂಶ ಹೇಳಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಯೋಜನೆಯ ಮಾರ್ಗಸೂಚಿಯ ಪ್ರಕಾರ, ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳ ಪರಿಹಾರ ಕಾರ್ಯಾಚರಣೆಗೆ ಜನಪ್ರತಿನಿಧಿಗಳು ತಮ್ಮ ಎಂಪಿಎಲ್‌ಎಡಿಎಸ್ ನಿಧಿಯಿಂದ 1 ಕೋ. ರೂ. ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News