ಅ.14ರಿಂದ ಉಡುಪಿ ಜಿಲ್ಲೆಯಲ್ಲಿ ಗಾಂಧಿ-150 ಅಭಿಯಾನ

Update: 2018-10-12 16:12 GMT

ಉಡುಪಿ, ಅ.11: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ‘ಗಾಂಧಿ ಅಭಿಯಾನ-150’ ಜಾಥ ಅ.14ರ ರವಿವಾರ ಉಡುಪಿ ಜಿಲ್ಲೆಗೆ ಆಗಮಿಸಲಿದೆ.

ಕಳೆದ ಅ.2ರ ಗಾಂಧೀ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗಳು ಚಾಲನೆ ನೀಡಿರುವ ಈ ಜಾಥ ರಾಜ್ಯಾದ್ಯಂತ ಸಂಚರಿಸಲಿದ್ದು, ಅ.14 ರಂದು ಶೃಂಗೇರಿ ಮೂಲಕ ಸಂಜೆ 5 ಗಂಟೆಗೆ ಕಾರ್ಕಳಕ್ಕೆ ಆಗಮಿಸಲಿದೆ. ಅಂದು ಕಾರ್ಕಳ ಪೇಟೆಯಲ್ಲಿ ಸಂಚರಿಸಲಿರುವ ಜಾಥಾ ಮರುದಿನ 15ರಂದು ಮಂಗಳೂರಿಗೆ ತೆರಳಲಿದೆ.

ಅ.16ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಟು ಪಡುಬಿದ್ರೆ- ಕಾಪು ಮೂಲಕ ಉಡುಪಿಗೆ ಆಗಮಿಸಲಿದೆ. ಅಪರಾಹ್ನ 3 ಗಂಟೆಗೆ ಉಡುಪಿ ಜೋಡುಕಟ್ಟೆಯಲ್ಲಿ ಗಾಂಧಿ-150 ಅಭಿಯಾನಕ್ಕೆ ಜಿಲ್ಲಾಡಳಿತದಿಂದ ಅಧಿಕೃತ ಸ್ವಾಗತ ದೊರೆಯಲಿದೆ. ಅ.17ರಂದು ಬೆಳಗ್ಗೆ 9ಕ್ಕೆ ಬ್ರಹ್ಮಾವರ, 11ಕ್ಕೆ ಕುಂದಾಪುರ ಕ್ಕೆ ಆಗಮಿಸುವ ಅಭಿಯಾನ ಬಳಿಕ ಶಿವಮೊಗ್ಗ ಜಿಲ್ಲೆ ಹೊಸನಗರಕ್ಕೆ ತೆರಳಲಿದೆ.

ಗಾಂಧೀಜಿ ಸಂದೇಶಗಳನ್ನು ಸಾರುವ ಸ್ಥಬ್ಧಚಿತ್ರ ಹಾಗೂ ಗಾಂಧೀಜಿಯವರ ಪ್ರಿಯ ಭಜನೆ, ಸಂಗೀತಗಳನ್ನು ಸಾರುತ್ತಾ ಈ ಅಭಿಯಾನ ಸಂಚರಿಸಲಿದೆ. ಜಾಥ ಹಾದು ಹೋಗುವ ಮಾರ್ಗದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾತ್ಮ ಗಾಂಧೀಜಿಗೆ ನಮನಗಳನ್ನು ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ವಾರ್ತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News