ಅಮೆರಿಕದ 800 ಫೇಸ್‌ಬುಕ್ ಖಾತೆ, ಪುಟ ವಜಾ

Update: 2018-10-12 17:56 GMT

ನ್ಯೂಯಾರ್ಕ್, ಅ. 12: ಅಮೆರಿಕದ ಮಧ್ಯಂತರ ಚುನಾವಣೆಗೆ ಕೆಲವೇ ವಾರಗಳು ಇರುವಂತೆಯೇ, ರಾಜಕೀಯ ಪ್ರೇರಿತ ಲಿಂಕ್‌ಗಳನ್ನು ಬಳಕೆದಾರರಿಗೆ ಕಳುಹಿಸುವ ಅಮೆರಿಕದ 800ಕ್ಕೂ ಅಧಿಕ ಪುಟಗಳು ಮತ್ತು ಖಾತೆಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ.

‘ಕೃತ್ರಿಮ ವರ್ತನೆ’ಯನ್ನು ತೋರಿಸಿರುವುದಕ್ಕಾಗಿ ಈ ಖಾತೆಗಳು ಮತ್ತು ಪುಟಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಈ ಖಾತೆಗಳು ಮತ್ತು ಪುಟಗಳು, ವಾಸ್ತವಿಕವಾಗಿ ಇರುವುದಕ್ಕಿಂತ ಹೆಚ್ಚು ಜನಪ್ರಿಯವಾಗಿರುವುದಾಗಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದವು ಎಂದು ಫೇಸ್‌ಬುಕ್ ಹೇಳಿದೆ.

ಈ ಖಾತೆಗಳು ಫೇಸ್‌ಬುಕ್‌ಗೆ ಹೊರತಾದ ಹಾಗೂ ರಾಜಕೀಯ ಜಾಹೀರಾತುಗಳಿರುವ ವೆಬ್‌ಸೈಟ್‌ಗಳಿಗೆ ಜನರನ್ನು ಒಯ್ಯುತ್ತಿದ್ದವು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News