ಮೈಕಲ್ ಚಂಡಮಾರುತ: ಮೃತರ ಸಂಖ್ಯೆ 6ಕ್ಕೆ ಏರಿಕೆ

Update: 2018-10-12 18:00 GMT

ಫ್ಲೋರಿಡ, ಅ. 12: ಅಮೆರಿಕದ ಫ್ಲೋರಿಡಕ್ಕೆ ಬುಧವಾರ ಅಪ್ಪಳಿಸಿದ ‘ಮೈಕಲ್’ ಚಂಡಮಾರುತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 6ಕ್ಕೇರಿದೆ.

ಶೋಧ ಮತ್ತು ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಚಂಡಮಾರುತವು ಇನ್ನು ಗಂಟೆಗೆ 50 ಮೈಲಿ ವೇಗದ ಗಾಳಿಯೊಂದಿಗೆ ವರ್ಜೀನಿಯ ಮೂಲಕ ಹಾದು ಹೋಗುವ ನಿರೀಕ್ಷೆಯಿದೆ.

 ಚಂಡಮಾರುತವು ಬುಧವಾರ ಮಧ್ಯಾಹ್ನ 2 ಗಂಟೆಗೆ ಫ್ಲೋರಿಡದ ಮೆಕ್ಸಿಕೊ ಬೀಚ್ ಸಮೀಪ ಭೂಮಿಗೆ ಅಪ್ಪಳಿಸಿತು. ಮನೆಗಳು ಮತ್ತು ಅಂಗಡಿಗಳನ್ನು ಉರುಳಿಸಿದ ಅದು ಅವಶೇಷಗಳ ರಾಶಿಯನ್ನೇ ಸೃಷ್ಟಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News