ಆರೋಪಿಯ ಬಿಡುಗಡೆ ಪ್ರಶ್ನಿಸಿ ಸಂತ್ರಸ್ತ ಮನವಿ ಸಲ್ಲಿಸಬಹುದು: ಸುಪ್ರೀಂ ಕೋರ್ಟ್

Update: 2018-10-12 18:25 GMT

ಹೊಸದಿಲ್ಲಿ, ಅ. 12: ಆರೋಪಿಯ ದೋಷಮುಕ್ತಿಗೊಳಿಸಿರು ವುದನ್ನು ಕ್ರಿಮಿನಲ್ ಪ್ರಕರಣದ ಸಂತ್ರಸ್ತ ಅಪರಾಧ ದಂಡ ಸಂಹಿತೆ ಅಡಿಯಲ್ಲಿ ಸಂಬಂಧಿತ ನ್ಯಾಯಾಲಯದ ಅನುಮತಿ ಇಲ್ಲದೆ ಮೇಲಿನ ನ್ಯಾಯಾಲಯದ ಪ್ರಶ್ನಿಸಿ ಮನವಿ ಸಲ್ಲಿಸಬಹುದು. ನ್ಯಾಯಮೂರ್ತಿ ಎಂ.ಬಿ. ಲೋಕೂರು ನೇತೃತ್ವದ ಮೂವರು ಸದಸ್ಯರ ಪೀಠ 2:1 ಬಹುಮತದ ಈ ತೀರ್ಪು ನೀಡಿತು.

 ಅಪರಾಧದ ಸಂತ್ರಸ್ತನಿಗೆ/ಸ್ತೆಗೆ ಅನುಕೂಲವಾಗುವಂತೆ ಸಿಆರ್‌ಪಿಸಿಯ 372 ಕಲಂ ‘ವಾಸ್ತವತೆ, ಉದಾರತೆ, ಪ್ರಗತಿಪರತೆ’ಯ ವ್ಯಾಖ್ಯಾನ ನೀಡುತ್ತದೆ ಎಂದು ಎಂ.ಬಿ. ಲೋಕೂರು ಪ್ರತಿಪಾದಿಸಿದ್ದಾರೆ. ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹಾಗೂ ನ್ಯಾಯಮೂರ್ತಿ ಲೋಕೂರ್ ಅವರ ಇಬ್ಬರ ತೀರ್ಪನ್ನು ಲೋಕೂರ್ ಅವರೇ ಬರೆದಿದ್ದು, ಸಿಆರ್‌ಪಿಸಿಯ 372ನೇ ಕಲಂನ ನಿಯಮ ಅಪರಾಧದ ಸಂತ್ರಸ್ತನಿಗೆ ನೆರವು ನೀಡುತ್ತದೆ ಎಂದು ಹೇಳಿದ್ದಾರೆ. ಮೂರನೇ ನ್ಯಾಯಮೂರ್ತಿ ದೀಪಕ್ ಗುಪ್ತಾ ಭಿನ್ನ ತೀರ್ಪು ನೀಡಿದ್ದಾರೆ. ಸಿಆರ್‌ಪಿಸಿಯ 378(3) ಕಲಂನ ಪ್ರಕಾರ ಸಂತ್ರಸ್ತ ಮೇಲ್ಮನವಿಗೆ ಅವಕಾಶ ಕೋರದೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂಬುದು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.

 ಅಪರಾಧದ ಸಂತ್ರಸ್ತರ ಹಕ್ಕುಗಳ ಬಗ್ಗೆ ಸಂಸತ್ತು, ನ್ಯಾಯಾಂಗ ಹಾಗೂ ನಾಗರಿಕ ಸಮಾಜ ಕೇವಲ ‘ವಿರಳ ಗಮನ’ ನೀಡುತ್ತದೆ ಎಂದು ಬಹುಮತದ ತೀರ್ಪು ವಿಷಾದಿಸಿದೆ ಹಾಗೂ ಅವರಿಗಾಗಿ ಏನಾದರೂ ಮಾಡಬೇಕಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News