ದ್ವಿತೀಯ ಟೆಸ್ಟ್: ಶತಕದ ಹಾದಿಯಲ್ಲಿ ಪಂತ್-ರಹಾನೆ

Update: 2018-10-13 12:42 GMT

ಹೈದರಾಬಾದ್, ಅ.13: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಂಡೀಸ್‌ಗೆ ಭಾರತ ತಿರುಗೇಟು ನೀಡಿದೆ.

 ಟೆಸ್ಟ್‌ನ ಎರಡನೇ ದಿನವಾಗಿರುವ ಶನಿವಾರ ದಿನದಾಟದಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 81 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿದೆ.

 ವಿಂಡೀಸ್‌ನ ಮೊತ್ತವನ್ನು ಸರಿಗಟ್ಟಲು ಭಾರತ ಇನ್ನು 3 ರನ್ ಗಳಿಸಬೇಕಾಗಿದೆ.

 75 ರನ್ ಗಳಿಸಿರುವ ಅಜಿಂಕ್ಯ ರಹಾನೆ ಮತ್ತು 85 ರನ್ ಗಳಿಸಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.ಇವರು 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 146 ರನ್ ದಾಖಲಿಸಿ ಬ್ಯಾಟಿಂಗ್‌ನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

52ನೇ ಟೆಸ್ಟ್ ಆಡುತ್ತಿರುವ ರಹಾನೆ 10ನೇ ಶತಕ ದಾಖಲಿಸುವ ಹಾದಿಯಲಿದ್ದಾರೆ. ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಳೆದ ಟೆಸ್ಟ್‌ನಲ್ಲಿ 92 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು. ಇದೀಗ ಎರಡನೇ ಟೆಸ್ಟ್‌ನಲ್ಲಿ ಶತಕ ದಾಖಲಿಸುವ ಪ್ರಯತ್ನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News