ಮೂಡುಬಿದಿರೆ : ಯೆನೆಪೊಯ ಎಂಜಿನಿಯರಿಂಗ್ ಕಾಲೇಜಿನ 125 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Update: 2018-10-13 15:01 GMT

ಮೂಡುಬಿದಿರೆ, ಅ. 13: ತೋಡಾರಿನಲ್ಲಿರುವ ಯೆನೆಪೊಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿವಿಧ ವಿಭಾಗದ 125 ಪದವೀಧರರಿಗೆ ಶನಿವಾರ ಕಾಲೇಜಿನ ಕ್ಯಾಂಪಸ್‍ನಲ್ಲಿ ಪದವಿ ಪ್ರದಾನ ಮಾಡಲಾಯಿತು.

ಐಡಿ ಪ್ರೆಶ್ ಫೂಡ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ಮುಸ್ತಫಾ ಪಿ.ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪದವಿ ಪ್ರದಾನ ಮಾಡಿ ಮಾತನಾಡಿ ವಿದ್ಯಾರ್ಥಿಗಳು ಬದಲಾವಣೆಗಳತ್ತ ಹೆಜ್ಜೆ ಇಡಬೇಕು. ಸಮಾಜದ ಕುಂದು ಕೊರತೆಗಳನ್ನು ಹುಡುಕಿದಾಗ ಅವು ನಮ್ಮ ಸಂಶೋಧನೆಗೆ ದಾರಿ ಮಾಡಿ ಕೊಡುತ್ತವೆ. ಈ ನಿಟ್ಟಿನಲ್ಲಿ ಮೊದಲು ನೀವು ಜೀವನದಲ್ಲಿ ಬದಲಾದರೆ ಅದರ ಉಪಯೋಗವು ಮುಂದೆ ನಿಮ್ಮ ಜೀವನದಲ್ಲಿ ಕಂಡು ಬರುತ್ತದೆ ಎಂದು ಹೇಳಿದ ಅವರು ತಾನು ನಡೆಸುತ್ತಿರುವ ಉದ್ಯಮದಲ್ಲಿ ಮೊದಲ 3 ಮೂರು ವರ್ಷ ಪಟ್ಟ ಶ್ರಮ ಮತ್ತು ಎದುರಿಸಿರುವ ಅವಮಾನಗಳ ಬಗ್ಗೆ, ಮತ್ತು ಹೇಗೆ ಹೊರಗೆ ಬಂದು ಉದ್ಯೋಗಗಳನ್ನು ಸೃಷ್ಟಿಸಬಹುದು ಎಂಬುದರ ಬಗ್ಗೆ ವಿವರಿಸಿದರು.

ಯೆನೆಪೊಯ ಗ್ರೂಫ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯುವಜನತೆ ಬದಲಾವಣೆಯ ರೂವಾರಿಗಳಾಗಬೇಕೆಂದರು. ಯುನಿವರ್ಸಿಟಿಯ ಟಾಪರ್ ಸಂತೋಷ್ ಅವರನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. 

ಯೆನೆಪೊಯ ಗ್ರೂಫ್‍ನ ಅಬ್ದುಲ್ ಜಾವೇದ್, ಆಡಳಿತ ಸಮಿತಿಯ ಸದಸ್ಯ ರಾಮಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಎನ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರಸನ್ನ ರಾವ್, ಎಲೆಕ್ಟ್ರೋನಿಕ್ಸ್ ವಿಭಾಗದ ಮುಖ್ಯಸ್ಥ ಗಂಗಾಧರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ಮತ್ತು ಇನ್ಫೋರ್ಮೇಶನ್ ಸೈನ್ಸ್‍ನ ಮುಖ್ಯಸ್ಥ ಪಾಂಡು ನಾಯ್ಕ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಆರ್.ಜಿ ಡಿಸೋಜಾ ಸ್ವಾಗತಿಸಿ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕರಾದ ವಿಜಯ್ ಕಾರ್ಯಕ್ರಮ ನಿರೂಪಿಸಿದರು. ವಾಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News