ದುಷ್ಕರ್ಮಿಗಳೊಂದಿಗೆ ಗುಂಡಿನ ಕಾಳಗ: ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರ ಸಾವು

Update: 2018-10-13 15:37 GMT

ಖಗರಿಯಾ(ಬಿಹಾರ),ಅ.13: ಖಗರಿಯಾ ಜಿಲ್ಲೆಯ ಪಸ್ರಹಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ಸಮಾಜ ವಿರೋಧಿ ಶಕ್ತಿಗಳೊಂದಿಗಿನ ಗುಂಡಿನ ಕಾಳಗದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಕೊಲ್ಲಲ್ಪಟ್ಟಿದ್ದು,ಓರ್ವ ಕಾನ್‌ಸ್ಟೇಬಲ್ ಗಾಯಗೊಂಡಿದ್ದಾನೆ.

ದುಧೇಲಾ ದಿಯಾರಾ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಆಶಿಷ್ ಕುಮಾರ ಸಿಂಗ್(30) ನೇತೃತ್ವದ ಪೊಲೀಸ್ ತಂಡವು ನಸುಕಿನ ಒಂದು ಗಂಟೆಯ ಸುಮಾರಿಗೆ ಅಲ್ಲಿಗೆ ತೆರಳಿತ್ತು. ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡುಗಳನ್ನು ಹಾರಿಸಿದ್ದು,ಬಳಿಕ ಕೆಲವು ಗಂಟೆಗಳವರೆಗೆ ನಡೆದ ಗುಂಡಿನ ಕಾಳಗದಲ್ಲಿ ಸಿಂಗ್ ಮೃತಪಟ್ಟಿದ್ದಾರೆ. ಕಾನ್‌ಸ್ಟೇಬಲ್ ದುರ್ಗೇಶ ಸಿಂಗ್ ಗಾಯಗೊಂಡಿದ್ದಾನೆ ಎಂದು ಎಸ್‌ಪಿ ಮೀನು ಕುಮಾರ್ ತಿಳಿಸಿದರು. ಗಾಯಾಳುವನ್ನು ಸಮೀಪದ ಭಾಗಲ್ಪುರ ಆಸ್ಪತ್ರೆಗ ದಾಖಲಿಸಲಾಗಿದೆ.

ದುಷ್ಕರ್ಮಿಗಳ ಗುಂಪಿನ ಓರ್ವ ಕೂಡ ಕೊಲ್ಲಲ್ಪಟ್ಟಿದ್ದು,ಆತನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News