ಛತ್ತೀಸ್‌ಗಢ ಕಾಂಗ್ರೆಸ್ ನಾಯಕ ಬಿಜೆಪಿಗೆ ಸೇರ್ಪಡೆ

Update: 2018-10-13 16:36 GMT

ರಾಯ್‌ಪುರ, ಅ.13: ಚತ್ತೀಸ್‌ಗಢ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ರಾಮ್‌ದಯಾಳ್ ಉಯಿಕೆ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚತ್ತೀಸ್‌ಗಢದ ವಿಧಾನಸಭೆಗೆ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವಂತೆಯೇ, ಇದಕ್ಕೆ ಒಂದು ತಿಂಗಳು ಮುಂಚಿತವಾಗಿ ರಾಮ್‌ದಯಾಳ್ ಬಿಜೆಪಿ ಸೇರಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ.

ಪಾಲಿ-ಠಾಣಾಖಾರ್ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ರಾಮ್‌ದಯಾಳ್‌ರನ್ನು ಇಂದು ಬಿಲಾಸ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಮತ್ತಿತರ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಅಮಿತ್‌ಶಾ ಅವರು ಪ್ರಸಕ್ತ ಎರಡು ದಿನಗಳ ಚತ್ತೀಸ್‌ಗಢ ಪ್ರವಾಸದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಬುಡಕಟ್ಟು ಸಮುದಾಯಗಳ ನಾಯಕರನ್ನು ಕಡೆಗಣಿಸಲಾಗುತ್ತಿದೆ ಮತ್ತು ಅವರಿಗೆ ಯಾವುದೇ ಸ್ಥಾನ ಮಾನ ನೀಡುತ್ತಿಲ್ಲ ಎಂದು ಯುಯಿಕೆ ಈ ಸಂದರ್ಭದಲ್ಲಿ ಆಪಾದಿಸಿದರು. ಕಾಂಗ್ರೆಸ್ ನಾಯಕರು ಆಡುತ್ತಿರುವುದಕ್ಕೂ ಮತ್ತು ಮಾಡುತ್ತಿರುವುದಕ್ಕೂ ನಡುವೆ ಭಾರೀ ವ್ಯತ್ಯಾಸವಿದೆಯೆಂದವರು ದೂರಿದರು.

ಉಯಿಕೆ ಅವರು 2000ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಮುನ್ನ ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು. ಬಿಜೆಪಿಗೆ ತನ್ನ ಸೇರ್ಪಡೆಯು ‘ಘರ್‌ವಾಪ್ಸಿ’ ಎಂದು ಉಯಿಕೆ ತನ್ನನ್ನು ಬಣ್ಣಿಸಿಕೊಂಡದರು.

ರಾಮ್‌ದಯಾಳ್ ಉಯಿಕೆ ಬಿಜೆಪಿಗೆ ಪಕ್ಷಾಂತರಗೊಂಡ ಬಗ್ಗೆ ಚತ್ತೀ್ಗಢ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾೇಲ್ ಪ್ರತಿಕ್ರಿಯಿಸುತ್ತಾ, ಚುನಾವಣಾ ಋತುವಿನಲ್ಲಿ ರಾಜಕಾರಣಿಗಳು ಪಕ್ಷ ಬದಲಾಯಿಸುವುದೂ ಅಸಹಜವೇನೂ ಅಲ್ಲ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ತಾನು ರಾಮ್‌ದಯಾಳ್‌ರನ್ನು ಭೇಟಿಯಾಗಿದ್ದರೂ, ಆಗ ಅವರು ಈ ಬಗ್ಗೆ ಏನನ್ನೂ ಹೇಳಿರಲಿಲ್ಲ’ ಎಂದು ಬಾಲ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

 ಚತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 12ರಂದು ಮೊದಲ ಹಂತದ ಹಾಗೂ 20ರಂದು ದ್ವಿತೀ ಯ ಹಂತದ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News