ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ: ಶಿವಸೇನೆ ಎಚ್ಚರಿಕೆ

Update: 2018-10-13 16:38 GMT

ಹೊಸದಿಲ್ಲಿ, ಅ.13: ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿರುವ ಶಿವಸೇನೆಯ ಕೇರಳ ಘಟಕ ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆಗೈಯಲಾಗುವುದು ಎಂದು ಎಚ್ಚರಿಸಿದೆ.

“ಅಕ್ಟೋಬರ್ 17 ಮತ್ತು 18ರಂದು ಪಂಬಾ ನದಿ ಸಮೀಪ ನಮ್ಮ ಕೆಲ ಮಹಿಳಾ ಕಾರ್ಯಕರ್ತೆಯರು ಜಮಾಯಿಸಲಿದ್ದಾರೆ. ಶಬರಿಮಲೆಗೆ ಯಾರಾದರೂ ಮಹಿಳೆಯರು ಪ್ರವೇಶಿಸಲು ಯತ್ನಿಸಿದರೆ ನಮ್ಮ ಕಾರ್ಯಕರ್ತೆಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ” ಎಂದು ಶಿವಸೇನೆಯ ಸದಸ್ಯ ಪೆರಿಂಗಮ್ಮಲ ಅಜಿ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸುತ್ತಾ ಬಂದಿರುವ ಶಿವಸೇನೆ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News