'ಆಧಾರರಹಿತ ಆರೋಪಗಳು ವೈರಲ್ ಜ್ವರದಂತಾಗಿದೆ'

Update: 2018-10-14 11:47 GMT

ಹೊಸದಿಲ್ಲಿ, ಅ. 14: ಸಾಕ್ಷಿಗಳಿಲ್ಲದೆ ಆರೋಪಗಳನ್ನು ಮಾಡುವುದು 'ವೈರಲ್ ಜ್ವರ'ದಂತಾಗಿದೆ ಎಂದು ಕೇಂದ್ರ‌ ಸಚಿವ ಎಂ.ಜೆ ಅಕ್ಬರ್ ಹೇಳಿದ್ದಾರೆ‌.

ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ. 

"ಸಾಕ್ಷಿಗಳಿಲ್ಲದೆ ಆರೋಪಗಳನ್ನು ಮಾಡುವುದು ಕೆಲ ವರ್ಗಗಳಿಗೆ ವೈರಲ್ ಜ್ವರದಂತಾಗಿದೆ‌. ಆರೋಪಗಳು ಏನೇ ಇರಲಿ ನಾನೀಗ ಹಿಂದಿರುಗಿದ್ದೇನೆ. ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲು ನಮ್ಮ ವಕೀಲರು ಈ ಆಧಾರರಹಿತ ಆರೋಪಗಳ ಬಗ್ಗೆ ಗಮನಹರಿಸಲಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸುಳ್ಳು‌ ಎಂದವರು ಹೇಳಿದರು.

ತನ್ನ ವಿರುದ್ಧದ ಆರೋಪಗಳ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಆರೋಪಿಸಿದ ಅವರು, ಚುನಾವಣೆಗೂ ಕೆಲ‌ ತಿಂಗಳ ಮೊದಲು ಯಾಕೆ ಈ ಆರೋಪಗಳು ಕೇಳಿಬಂದಿವೆ ?, ಇದರ ಹಿಂದೆ ಯಾವುದಾದರೂ ಅಜೆಂಡಾ ಇದೆಯೇ ? ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News