ಮಂಗಳೂರು: ಶಾಸಕ ಬಿ.ಎಂ. ಫಾರೂಕ್ ಕಚೇರಿ ಉದ್ಘಾಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-10-14 18:23 GMT

ಮಂಗಳೂರು, ಅ. 14: ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರು ಮಂಗಳೂರಿನಲ್ಲಿ ಆರಂಭಿಸಿರುವ ನೂತನ ಕಚೇರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರವಿವಾರ ಸಂಜೆ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕರ ಕಚೇರಿಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಶಾಸಕರ ಕಚೇರಿಗಳು ಜನಸಂಪರ್ಕ ಕೇಂದ್ರವಾಗಿ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ ಎಂದು ಹಾರೈಸಿದರು.

ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ಐವನ್ ಡಿಸೋಜ, ಬಿ.ಎಂ.ಫಾರೂಕ್,  ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಅಯುಕ್ತ ಟಿ.ಆರ್.ಸುರೇಶ್, ಮೇಯರ್ ಭಾಸ್ಕರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೋ  ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಬಿ.ಎಂ. ಫಾರೂಕ್ ಅವರು ತಮ್ಮ ಶಾಸನ ಸಭಾ ಸದಸ್ಯತ್ವದಿಂದ ಪಡೆದ ಗೌರವಧನವನ್ನು ಬಡ, ಕ್ಯಾನ್ಸರ್, ಕಿಡ್ನಿ, ಹೃದಯದ ಖಾಯಿಲೆ ಗಳಿಂದ ಬಳಲುವ ರೋಗಿಗಳಿಗೆ ನೀಡುವ ನಿರ್ಧಾರದಂತೆ ಸುಮಾರು 38 ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ನೆರವು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News