‘ಸಂಭ್ರಮ’ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-10-14 14:01 GMT

ಮಣಿಪಾಲ, ಅ.14: ಉಡುಪಿ ಸಂಭ್ರಮ ಕಲ್ಚರಲ್ ಟ್ರಸ್ಟ್ ವತಿಯಿಂದ ‘ಸಂಭ್ರಮ’ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಜರಗಿತು.

ಸಿರಿ(ಕನ್ನಡ) ಚಿತ್ರ ಪ್ರಥಮ, ಅಂತಿಮ್ ಇಚ್ಚಾ(ಹಿಂದಿ) ಚಿತ್ರ ದ್ವಿತೀಯ, ಅಂತರಂಗ(ಕನ್ನಡ) ಚಿತ್ರ ತೃತೀಯ ಬಹುಮಾನ ಪಡೆದುಕೊಂಡಿತು. ಉತ್ತಮ ನಿರ್ದೇಶಕ- ಗುರುಪ್ರಸಾದ್(22 ಇಯರ್ಸ್‌ ಇನ್ ಮಲ್ಪೆ), ಉತ್ತಮ ಕಥೆ- ಚೇತನ್ ನೈಲಾಡಿ(ನಿರ್ಣಯ), ಚಿತ್ರಕಥೆ- ಪ್ರತಿಕ್ ಸಾಲ್ಯಾನ್(ಫೇಸ್‌ಬುಕ್ ಗೆಳತಿ), ಸಂಗೀತ- ಸಂದೀಪ್ ಬಳ್ಳಾಲ್(ಒಂದು ಕ್ಷಣ), ಛಾಯಗ್ರಹಣ- ಸುರೇಂದ್ರ ಕುಲಾಲ್(ಜಾತಿ-ಪ್ರೀತಿ), ಸಂಕಲನಕಾರ- ನಾಗರ್ಜುನ್ ಮಂಗಲ್ಪಾಡಿ(ಆ ಒಂದು ಕರೆ), ನಟ- ಸುನಿಲ್ ನೆಲ್ಲಿಗುಡ್ಡೆ(ಮೌಲ್ಯ), ನಟಿ- ರೂಪಶ್ರೀ ವರ್ಕಾಡಿ(ಮಾ), ಪೋಷಕ ನಟ-ದೀಪಕ್ ರೈ ಪಾಣಾಜೆ (ತಿರುವು), ಪೋಷಕ ನಟಿ- ಸುಜಾತಾ ಶೆಟ್ಟಿ, ಖಳ ನಾಯಕ- ವಿಶು ರಾವ್ (ಈ ಏರ್), ಹಾಸ್ಯ ನಟ- ಪ್ರಶಾಂತ್(ನೀರ್‌ಬೋಡಾ), ಹಾಸ್ಯ ನಟಿ- ಪ್ರಜ್ಞಾ (ಸ್ನೇಹಧಾರೆ), ಬಾಲ ನಟ- ಧನುಷ್, ಬಾಲ ನಟಿ- ಕಾವ್ಯಾ ಮಯ್ಯ (ವಿಮೋಚನೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭವನ್ನು ಮಣಿಪಾಲ ಆರ್‌ಎಸ್‌ಬಿ ಸಂಘದ ಗೌರವಾಧ್ಯಕ್ಷ ಗೋಕುಲ್‌ದಾಸ್ ನಾಯಕ್ ಉದ್ಘಾಟಿಸಿದರು. ಮಾಜಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಕಾರ್ಕಳ ಹಿರ್ಗಾನ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಅಶೋಕ್ ನಾಯಕ್, ಸಂಭ್ರಮ ಕಲ್ಚರಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು, ಅಧ್ಯಕ್ಷ ಸಂದೀಪ್ ಕಾಮತ್, ತಂಡದವರಾದ ಪ್ರವೀಣ್ ನಾಯಕ್, ಸುಹಾಸ್ ಶೆಣೈ, ಸುಕೇಶ್ ಕುಮಾರ್, ಖ್ಯಾತ ನಟರುಗಳಾದ ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಉಪಸ್ಥಿತರಿದ್ದರು.

ಖ್ಯಾತ ಹಾಸ್ಯ ಕಲಾವಿದ ಅರವಿಂದ ಬೋಳಾರ್, ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಂಘದ ಅಧ್ಯಕ್ಷ ಪಮ್ಮಿ ಕೋಡಿಯಾಲ್‌ಬೈಲ್, ರಾಜೇಶ್ ಸ್ಕೈಲಾರ್ಕ್, ಮೋಹನ್‌ದಾಸ್ ರೈ ಶುಭ ಹಾರೈಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್‌ಬೈಲ್ ವಹಿಸಿದ್ದರು. ಉದ್ಯಮಿಗಳಾದ ವಿದ್ಯಲತಾ ಯು ಶೆಟ್ಟಿ, ಜ್ಯೋತಿ ಹರೀಶ್, ಸದಾನಂದ ಪ್ರಭು, ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್‌ನ ಪ್ರಕಾಶ್ ಸುವರ್ಣ ಕಟಪಾಡಿ ನಮ್ಮ ಸಿನಿಲೋಕ ಚಾನೆಲ್‌ನ ನಿರ್ದೇಶಕ ವಿಶ್ವನಾಥ್ ಕೋಡಿಕ್ಕ್, ಚೇತನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News