ಸಹ್ಯಾದ್ರಿಯಲ್ಲಿ ಹ್ಯಾಕ್ ಅಕ್ಟೋಬರ್ ಫೆಸ್ಟ್ ಕಾರ್ಯಾಗಾರ

Update: 2018-10-14 14:59 GMT

ಮಂಗಳೂರು, ಅ.14: ಸಹ್ಯಾದ್ರಿ ಓಪನ್ ಸೋರ್ಸ್ ಸಮುದಾಯ (ಎಸ್‌ಒಎಸ್‌ಇ)ವು ಕೆ-ಟೆಕ್ ಇನೋವೇಶನ್ ಹಬ್ ಅಸೋಸಿಯೇಶನ್‌ನ ಸಹಯೋಗದಲ್ಲಿ 18 ಗಂಟೆಗಳ ಹ್ಯಾಕ್ ಅಕ್ಟೋಬರ್ ಫೆಸ್ಟ್ ಕಾರ್ಯಕ್ರಮವು ಶನಿವಾರ ಸಹ್ಯಾದ್ರಿಯಲ್ಲಿ ಆಚರಿಸಲಾಯಿತು.

ಬೆಂಗಳೂರಿನ ಕಟ್ಮೈ ಇನ್ಫೋಟೆಕ್ನಾಲಜಿ ಪ್ರೈ.ಲಿ.ನ ನಿರ್ದೇಶಕ ಶಶಾಂಕ್ ಕೃಷ್ಣ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಾಥನ್ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ ರಾವ್ ಕುನ್ಟೆ, ಫ್ಯಾಕಲ್ಟಿ ಸಂಯೋಜಕ ಪ್ರೊ.ಪ್ರಕ್ಷಿತ್ ರೈ ಮತ್ತು ಸಹ್ಯಾದ್ರಿ ಓಪನ್ ಸೋರ್ಸ್ ಸಮುದಾಯದ ಅಧ್ಯಕ್ಷೆ ಅರ್ಜುನ್ ಸುವರ್ಣ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹ್ಯಾಕ್ ಅಕ್ಟೋಬರ್ ಫೆಸ್ಟ್ ಎಂಬುದು ಜಿಟ್ಹಬ್ ಮತ್ತು ಟ್ವಿಲಿಯೊ ಜೊತೆಗಿನ ಸಹಭಾಗಿತ್ವದಲ್ಲಿ ಡಿಜಿಟಲ್ ಆಪರೇಷನ್ ನಡೆಸುವ ಸಾಫ್ಟ್‌ವೇರ್‌ನ ಮಾಸಿಕ ಆಚರಣೆಯಾಗಿದೆ. ಇದು ಪ್ರತಿಯೊಬ್ಬರಿಗೂ ಮುಕ್ತವಾಗಿದೆ. ವೈಯಕ್ತಿಕ ಬೆಳವಣಿಗೆ, ವೃತ್ತಿಪರ ಅವಕಾಶಗಳು ಮತ್ತು ಸಮುದಾಯಕ್ಕೆ ದಾರಿ ಮಾಡಿಕೊಡುವ ಆರಂಭಿಕ ವಿದ್ಯಾರ್ಥಿಗಳಿಗೆ ಮತ್ತು ಪರಿಣತರಿಗೆ ಗಿಟ್‌ಹಬ್‌ನಲ್ಲಿ ಆಯೋಜಿಸಲಾದ ತೆರೆದ ಮೂಲ ಸಾಫ್ಟ್ ವೇರ್ ಗಳಿಗೆ ಇದು ಅರ್ಥಪೂರ್ಣ ಕೊಡುಗೆಗಳನ್ನು ಪ್ರೋತ್ಸಾಹಿಸುತ್ತದೆ. ಎಸ್‌ಒಎಸ್‌ಇ ಸಮುದಾಯವು ವಿದ್ಯಾರ್ಥಿಗಳನ್ನು ಮತ್ತು ವೃತ್ತಿಪರ ವ್ಯಕ್ತಿಗಳನ್ನು ಒಟ್ಟುಗೂಡಿಸುತ್ತದೆ. ಮೊಜಿಲ್ಲಾ ಕ್ಯಾಂಪಸ್ ಕ್ಲಬ್‌ಗಳು, ಡೆವಲಪರ್ ವಿದ್ಯಾರ್ಥಿ ಕ್ಲಬ್‌ಗಳು, ಮತ್ತು ಗಿಟ್‌ಹಬ್‌ಕ್ಯಾಂಪಸ್ ತಜ್ಞರು ಹ್ಯಾಕ್ ಅಕ್ಟೋಬರ್ ಫೆಸ್ಟ್ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News