ಮೂಡುಬಿದಿರೆ: ನೇಣು ಬಿಗಿದು ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆ

Update: 2018-10-14 15:38 GMT

ಮೂಡುಬಿದಿರೆ, ಅ. 14: ಹಲವು ಸೇವಾಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ, ಪಿಗ್ಮಿ ಸಂಗ್ರಾಹಕರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ವಿಶಾಲನಗರ ನಿವಾಸಿ, ಪಿಗ್ಮಿ ಸಂಗ್ರಾಹಕ ಪಾಂಡುರಂಗ ಡಾಂಗೆ (53)  ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಡಾಂಗೆ ಇತ್ತೀಚಿಗೆ ಖಿನ್ನತೆಯಿಂದಿದ್ದರು ಎನ್ನಲಾಗಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ . ಅವರು ಸ್ಥಳೀಯ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ಪತ್ನಿ, ಮೂವರು ಪುತ್ರರರನ್ನು ಅಗಲಿದ್ದಾರೆ. 

ಮೂಡುಬಿದಿರೆಯ ಮೈನ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಅವರು ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಗಣೇಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿಯಾಗಿ  ಸಕ್ರಿಯರಾಗಿದ್ದರು. ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿಯೂ ಕಾಣಿಸಿಕೊಳ್ಳುತ್ತಿದ್ದ ಡಾಂಗೆ ಹಲವು ವರ್ಷಗಳಿಂದ ಶವ ದಹನ ಸಂಸ್ಕಾರದ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ತೊಡಗಿಕೊಂಡಿದ್ದರು. ಅವರ ಸಮಾಜಮುಖಿ ಸೇವೆಗೆ 2017ರಲ್ಲಿ ಅವರಿಗೆ ರೋಟರಿ ಸಮ್ಮಾನ ಗೌರವವೂ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News