'ಆಳ್ವಾಸ್‍ನಲ್ಲಿ ಕೇರಳಿಯಂ' ಸಾಂಸ್ಕೃತಿಕ ವೈಭವ

Update: 2018-10-14 15:45 GMT

ಮೂಡುಬಿದಿರೆ, ಅ.14: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಸಾಹಿತ್ಯ, ಕಲೆ, ಕ್ರೀಡೆ, ಜೊತೆಗೆ ಅತ್ಯುತ್ತಮ ಬದುಕು ರೂಪಿಸುವಲ್ಲಿ ಯಶಸ್ಸು ಕಾಣುವತ್ತ ಮನಸ್ಸುಮಾಡಬೇಕು. ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಅವಕಾಶ ಗಳನ್ನು ಬಳಸಿಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಕಾಲೇಜು ಒಂದು ಒಳ್ಳೆಯ ಅಡಿಪಾಯ ಎಂದು ಕಣ್ಣೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಎನ್.ಕೆ.ಅಬ್ದುಲ್ ಖಾದರ್ ತಿಳಿಸಿದರು.

ಅವರು ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಆಳ್ವಾಸ್ ಕೇರಳಿಯಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡಿದರು. ಜಗತ್ತಿನಲ್ಲಿ ಇರುವುದು ಒಂದೇ ಸೂರ್ಯ, ಒಂದೇ ಗಾಳಿ, ಒಂದೇ ಭೂಮಿ. ಜಾತಿ, ಧರ್ಮ ಮಾತ್ರ ಬೇರೆ. ಆದರೆ ಈ ಭಾರಿ ಕೇರಳದಲ್ಲಿ ಪ್ರಯಳವಾದ ನಂತರದ ದಿನಗಳಲ್ಲಿ ಧರ್ಮವು ಒಂದಾಗಿದೆ ಎಂದು ಹೇಳಿದರು.

ಭಾರತ ಒಂದು ಹೂವಿನ ತೋಟವಿದ್ದಂತೆ, ತೋಟದೊಳಗಿನ ಹೂವು ದೇಶದ ರಾಜ್ಯಗಳು. ಪ್ರತಿಯೊಂದು ಹೂವಿಗೆ ತನ್ನದೇ ಆದ ಪರಿಮಳ, ಸೌಂದರ್ಯವಿದೆ. ಇದರಲ್ಲಿ ಒಂದು ಹೂ ಇಂದು ಆಳ್ವಾಸ್ ಕಾಲೇಜಿನಲ್ಲಿ ಅರಳಿದೆ. ಅದುವೇ ಕೇರಳಿಯಂ. ಇಲ್ಲಿ ಪ್ರತಿಯೊಂದು ಹೂವಿಗೂ ಸಮಾನ ಪ್ರಮುಖ್ಯತೆಯನ್ನು ನೀಡುತ್ತಾರೆ.  ಎಲ್ಲಾ ರೀತಿ ಸಂಪ್ರಾದಾಯವನ್ನು ಸಾರುವಂತಹ ಕೆಲಸವನ್ನು ಆಳ್ವಾಸ್ ವಿದ್ಯಾ ಸಂಸ್ಥೆ ಮಾಡುತ್ತದೆ ಎಂದು ನುಡಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಕಾಲೇಜಿ ಉಪದ್ಯಕ್ಷ ವಿವೇಕ್ ಆಳ್ವ ಮತ್ತು ಆಳ್ವಾಸ್  ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪ್ತಿ ಬಾಬು ಸ್ವಾಗತಿಸಿ, ಆಶ್ವತಿ ಜೈನ್ ನಿರೂಪಿಸಿದರು.

ಚಂಡೆ ಮತ್ತು ಕೇರಳದ ಸಂಪ್ರಾದಾಯ ಉಡುಗೆ ತೊಟ್ಟು ಮೆರವಣಿಗೆ ಮೂಲಕ ಅಥಿತಿಗಳನ್ನು ಸ್ವಾಗತಿಸಿದರು. ಕೇರಳ ರಾಜ್ಯವನ್ನು ಆಳುತ್ತಿದ್ದ ಮಾವೇಲಿ ರಾಜನ ವೇಷದಾರಿಯಾಗಿ ಮೆರವಣಿಗೆಗೆ ಮತ್ತಷ್ಟು ಮೆರುಗನ್ನು ತಂದು ಕೊಟ್ಟಿತ್ತು.ಪೂಕಳಂನಲ್ಲಿ  ಹೂವಿನ ಎಸಳುಗಳಿಂದ ಕೇರಳದ ಸಂಸ್ಕೃತಿಯನ್ನು ಮುಖವರ್ಣಿಯನ್ನು ರಚಿಸಲಾಯಿತು. ಕೇರಳದ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News