ಸುರತ್ಕಲ್ : ಅ. 22ರಂದು ಅಕ್ರಮ ಟೋಲ್ ಗೇಟ್ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ

Update: 2018-10-14 15:50 GMT

ಮಂಗಳೂರು, ಅ. 14: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ವತಿಯಿಂದ ಅಕ್ರಮ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ  ಅ.22ರಿಂದ ನಡೆಯುವ ಅನಿರ್ಧಿಷ್ಟಾವಧಿ ಧರಣಿ ಸಿದ್ಧತಾ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಸಮೀಪದ ತಡಂಬೈಲ್ ನ ಸುಪ್ರೀಮ್ ಹಾಲ್ ನಲ್ಲಿ ನಡೆಯಿತು.

ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹಿಸುವುದನ್ನು ನಿಲ್ಲಿಸಿ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಬೇಕು" ಎಂಬ ರಾಜ್ಯ ಸರಕಾರದ ಪ್ರಸ್ತಾಪದ ಹೊರತಾಗಿಯು ಗುತ್ತಿಗೆ  ನವೀಕರಿಸಲು ಮತ್ತೊಮ್ಮೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು ಅತಂಕಕಾರಿ ವಿಷಯ. ಈಗಾಗಲೇ  ಕೊನೆಗೊಳ್ಳಬೇಕಾದ ಟೋಲ್ ಸಂಗ್ರಹ ಹೆಸರಿನ ಸುಲಿಗೆ ಯಾವುದೇ ಭಯಬೀತಿಯಿಲ್ಲದೆ ಮುಂದುವರಿಯುತ್ತಿದೆ. ಈ ರೀತಿಯ ಸುಲಿಗೆಯನ್ನು ನಿಲ್ಲಿಸಲು, ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ  ಎದುರಾಗಿದೆ. ಅದಕ್ಕೆ ವಿವಿಧ ಸಂಘಟನೆಗಳು ಕೂಡಾ ನಮ್ಮೊಂದಿಗೆ ಕೈ ಜೋಡಿಸಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ವಿವರಿಸಿದರು.

ಡಿವೈಎಫ್ಐ, ಜಯಕರ್ನಾಟಕ ಸುರತ್ಕಲ್ ವಲಯ, ಡಿ ಎಸ್ ಎಸ್ ಸಹಿತ ವಿವಿಧ ಸಾಮಾಜಿಕ ಸಂಘಟನೆಗಳು, ಆಟೋ, ಟೆಂಪೊ, ಟ್ಯಾಕ್ಸಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗು ಇತರ ಸ್ಥಳೀಯ ವಿವಿದ ಸಂಘಟನೆಗಳ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News