ಐದು ತಿಂಗಳಲ್ಲಿ ಮೊದಲ ಬಾರಿಗೆ ಕುಸಿದ ಭಾರತದ ರಫ್ತು ಪ್ರಮಾಣ

Update: 2018-10-15 13:16 GMT

ಹೊಸದಿಲ್ಲಿ,ಅ.15: ಭಾರತದ ರಫ್ತು ಪ್ರಮಾಣ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಶೇ.2.5ರಷ್ಟು ಇಳಿಕೆಯಾಗಿದ್ದು, ಕಳೆದ ಐದು ತಿಂಗಳಲ್ಲಿ ಮೊದಲ ಬಾರಿಗೆ ನಕಾರಾತ್ಮಕ ವಲಯವನ್ನು ಪ್ರವೇಶಿಸಿದೆ ಎಂದು ಸರಕಾರವು ಸೋಮವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳು ತೋರಿಸಿವೆ.

ಆದರೆ ಸೆಪ್ಟೆಂಬರ್‌ನಲ್ಲಿ ಆಮದು ಪ್ರಮಾಣದಲ್ಲಿ ಶೇ.10.45ರಷ್ಟು ಏರಿಕೆಯಾಗಿದೆ. 2018-19ನೇ ಹಣಕಾಸು ವರ್ಷದ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಆಮದುಗಳಲ್ಲಿ ಶೇ.16.16ರಷ್ಟು ಹೆಚ್ಚಳವಾಗಿದೆ.

2018ರ ಸೆಪ್ಟೆಂಬರ್‌ನಲ್ಲಿ ವ್ಯಾಪಾರ ಕೊರತೆ ಅಥವಾ ಆಮದು ಮತ್ತು ರಫ್ತುಗಳ ನಡುವಿನ ಅಂತರವು 13.98 ಶತಕೋಟಿ ಡಾಲರ್‌ಗಳೆಂದು ಅಂದಾಜಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳುಗಳಲ್ಲಿ ವ್ಯಾಪಾರ ಕೊರತೆಯು 94.32 ಶತಕೋಟಿ ಡಾ.ಆಗಿದೆ.

 2018,ಮಾರ್ಚ್‌ನಲ್ಲಿ ಶೇ.0.66ರಷ್ಟು ಇಳಿಕೆಯನ್ನು ದಾಖಲಿಸಿದ ಬಳಿಕ ಎಪ್ರಿಲ್‌ನಿಂದ ರಫ್ತುಗಳು ಏರುಗತಿಯಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News