ಭಾರತೀಯ ಸಿನೆಮಾ ಮತ್ತು ದೂರದರ್ಶನ ನಿರ್ದೇಶಕರ ಸಂಘದಿಂದ ಸಾಜಿದ್ ಖಾನ್‌ಗೆ ನೋಟಿಸ್

Update: 2018-10-15 14:23 GMT

ಹೊಸದಿಲ್ಲಿ,ಅ.15: ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಅನೇಕ ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ಸಿನೆಮಾ ಮತ್ತು ದೂರದರ್ಶನ ನಿರ್ದೇಶಕರ ಸಂಘ ಖಾನ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಹಿಮ್ಮತ್ವಾಲಾ ಮತ್ತು ಹಮ್‌ಶಕಲ್ಸ್ ಸಿನೆಮಾಗಳ ನಿರ್ದೇಶಕರಾಗಿರುವ ನಿಮ್ಮ ವಿರುದ್ಧ ಪತ್ರಕರ್ತೆ ಕರಿಶ್ಮಾ ಉಪಧ್ಯಾಯ್ ಹಾಗೂ ಉದಯೋನ್ಮುಖ ನಟಿಯರಾದ ರಶೆಲ್ ವೈಟ್ ಮತ್ತು ಸಿಮ್ರನ್ ಸೂರಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಕುರಿತು ನಮಗೆ ಕಳುಹಿಸಿರುವ ಇಮೇಲ್ ದೂರನ್ನು ಕಂಡು ನಮಗೆ ಆಘಾತವಾಗಿದೆ ಎಂದು ಖಾನ್‌ಗೆ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ನಿಮ್ಮ ಅಶ್ಲೀಲ ಮತ್ತು ಕೆಟ್ಟ ನಡೆಗಳು ಭಾರತೀಯ ಸಿನೆಮಾ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಘನತೆಗೆ ಧಕ್ಕೆಯುಂಟು ಮಾಡಿದೆ. ಹಾಗಾಗಿ, ನಿಮ್ಮ ಈ ಕೆಟ್ಟ ವರ್ತನೆಗೆ ಕಾರಣವೇನು ಎಂಬುದನ್ನು ಈ ನೋಟಿಸ್ ದೊರೆತ ಏಳು ದಿನಗಳೊಳಗೆ ವಿವರಿಸುವಂತೆ ಆಗ್ರಹಿಸಲಾಗಿದೆ. ತಪ್ಪಿದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News