×
Ad

ಶಿರ್ವ: ಸೈಂಟ್ ಮೇರೀಸ್ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ

Update: 2018-10-15 20:49 IST

ಶಿರ್ವ, ಅ. 15: ಪ್ರತಿಯೊಬ್ಬ ವ್ಯಕ್ತಿಯೊಳಗೊಬ್ಬ ಸಾಧಕನಿದ್ದಾನೆ. ಕೆಲವರಲ್ಲಿ ಆತ ಕ್ರಿಯಾಶೀಲನಾಗಿರದೆ ಇರಬಹುದು. ಆತನನ್ನು ಬಡಿದೆಬ್ಬಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಬದುಕಿನಲ್ಲಿ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ ಎಂದು ಶಿರ್ವ ಸೈಂಟ್ ಮೇರೀಸ್ ಮತ್ತು ಡಾನ್‌ಬಾಸ್ಕೋ ಶಿಕ್ಷಣ ಸಂಸ್ಥೆಗಳ ಕರೆಸ್ಪಾಂಡೆನ್ಸ್ ವಂ. ಡೆನಿಸ್ ಡೇಸಾ ಹೇಳಿದ್ದಾರೆ.

ಶಿರ್ವದ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದಿಂದ ಸಂಸ್ಥೆಗಳ ಆವರಣದಲ್ಲಿ ಸ್ಥಾಪಿಸಲ್ಪಟ್ಟ ಸೈಂಟ್ ಮೇರೀಸ್ ಕ್ರಿಕೆಟ್ ಅಕಾಡಮಿ ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಿರ್ವದ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದಿಂದ ಸಂಸ್ಥೆಗಳ ಆವರಣದಲ್ಲಿ ಸ್ಥಾಪಿಸಲ್ಪಟ್ಟ ಸೈಂಟ್ ಮೇರೀಸ್ ಕ್ರಿಕೆಟ್ ಅಕಾಡಮಿ ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿರ್ವ ಪರಿಸರದಲ್ಲಿ ಕ್ರಿಕೆಟ್ ಆಟದಲ್ಲಿ ಅರಳಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತರಲು ಕ್ರಿಕೆಟ್ ಅಕಾಡಮಿ ಸಹಕಾರಿಯಾಗಲಿದೆ ಎಂದು ಮಂಗಳೂರು ಪ್ರೀಮಿಯರ್ ಲೀಗ್‌ನ ಅಧ್ಯಕ್ಷ ಮಮ್ಮದ್ ಸಿರಾಜುದ್ದೀನ್ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟಿಗೆ ದೊರೆಯುವ ಈ ಸೌಲಭ್ಯವನ್ನು ಉಪಯೋಗಿಸಿ ಕೆಲ ಮಂದಿಯಾದರೂ ಉನ್ನತ ಮಟ್ಟದ ಕ್ರಿಕೆಟ್‌ನತ್ತ ಹೆಜ್ಜೆ ಇಡುವಂತಾಗಲಿ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ಹಾರೈಸಿದರು.

ಸಮಾರಂಭದಲ್ಲಿ ಪ್ರಾಂಶುಪಾಲ ರಾಜನ್ ವಿ.ಎನ್., ವೇಣುಗೋಪಾಲ ಕೃಷ್ಣ ನೊಂದ, ವಂ. ಮಹೇಶ್ ಡಿಸೋಜ, ವಿಲ್ಸನ್ ಡಿಸೋಜ, ಲೀನಾ ಮಚಾದೊ, ಮೆಲ್ವಿನ್ ಅರಾಹ್ನ, ಸೈಮನ್ ಡಿಸೋಜ, ಸಫ್ತಾರ್ ಅಲಿ, ರಾಜೇಶ್ ಮಚಾದೊ, ಐರಿನ್ ಮೆಂಡೊಂಕಾ, ಪೌಲಿನ್ ಲೋಬೋ, ರೋನಲ್ಡ್ ಮೋರಸ್, ಪ್ರೊ.ರೆಬೆಕಾ ಮೆಂಡೋಂಕಾ, ಜಗದೀಶ್ ಮೊದಲಾ ದವರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ್ ಕೆ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News