ಜೋಕಟ್ಟೆ ಮಾಡಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಮನವಿ

Update: 2018-10-15 15:45 GMT

ಮಂಗಳೂರು, ಅ.15: ಜೋಕಟ್ಟೆ ಗ್ರಾಪಂ ವ್ಯಾಪ್ತಿಯ ಮಾಡಿಲ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಕಳೆದ ರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿರುವ ಕಾಮಗಾರಿ ವಿಳಂಬಗತಿಯಲ್ಲಿದೆ. ರಸ್ತೆ ದುರಸ್ತಿಗೆ ವೇಗ ನೀಡಲು ಆಗ್ರಹಿಸಿ ಎಸ್‌ಡಿಪಿಐನಿಂದ ಜೋಕಟ್ಟೆ ಅಧ್ಯಕ್ಷರು ಹಾಗೂ ಪಿಡಿಒಗೆ ಮನವಿ ಸಲ್ಲಿಸಲಾಯಿತು.

1.5 ಕೋಟಿ ರೂ. ಅನುದಾನದಲ್ಲಿ ಜೋಕಟ್ಟೆ ಗ್ರಾಪಂ ವ್ಯಾಪ್ತಿಯ ಮಾಡಿಲ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಹಾಗಾಗಿ ಈ ಕಾಮಗಾರಿಗೆ ಸಂಬಂಧಿಸಿ ಮಾಡಿಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಬರ್ಂಧ ವಿಧಿಸಿ ಎರಡು ವರ್ಷ ಕಳೆದಿದ್ದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ಅಡಚಣೆಯಾಗುತ್ತಿದೆ. ಪರ್ಯಾಯ ರಸ್ತೆಯಿಲ್ಲದೆ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಲೋಕೋಪಯೋಗಿ ಇಲಾಖೆಗೆ ಗ್ರಾಪಂನಿಂದ ತಕ್ಷಣ ಪತ್ರ ಬರೆದು ವಿಳಂಬವಾಗಿರುವುದಕ್ಕೆ ಸ್ಪಷ್ಟೀಕರಣ ನೀಡಬೇಕು. ಜೊತೆಗೆ ಪೂರ್ತಿಗೊಳಿಸುವ ಕುರಿತಾದ ಲಿಖಿತ ಭರವಸೆಯನ್ನು ಮುಂದಿನ 15 ದಿನಗಳೊಳಗೆ ಪಡೆದು, ನೀಡಬೇಕೆಂದು ನಿಯೋಗದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಸ್‌ಡಿಪಿಐ ಜೋಕಟ್ಟೆ ಗ್ರಾಮ ಸಮಿತಿ ಅಧ್ಯಕ್ಷ ಶಿಹಾಬ್ ನೇತೃತ್ವದಲ್ಲಿ ಅಮೀನ್, ಅಶ್ರಫ್ ಗುಡ್ಡೆ, ಬಿ.ಎಂ. ಸಲೀಂ, ಅಶ್ರಫ್ ಸಲ್ವಾ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News