ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ: ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಶತ್ರುಘ್ನ ಸಿನ್ಹಾ

Update: 2018-10-15 16:52 GMT

 ಮುಝಪ್ಫರನಗರ್, ಅ. 15: ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ರವಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಪ್ಪಂದದಲ್ಲಿ ರಿಲಾಯನ್ಸ್ ಡಿಫೆನ್ಸ್ ಅನ್ನು ಫ್ರಾನ್ಸ್‌ನ ವೈಮಾನಿಕ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‌ನ ಪಾಲುದಾರ ರನ್ನಾಗಿ ಮಾಡುವ ಬಗ್ಗೆ ಭಾರತ ಸರಕಾರ ಪ್ರಸ್ತಾಪಿಸಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿರುವು ದನ್ನು ಫ್ರಾನ್ಸ್‌ನ ಪತ್ರಿಕೆಯೊಂದು ಉಲ್ಲೇಖಿಸಿರುವುದಾಗಿ ಅವರು ತಿಳಿಸಿದ್ದಾರೆ.

 ತಾವ್ಲಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದ ರೈತರ ಪಂಚಾಯತ್‌ನಲ್ಲಿ ಮಾತನಾಡಿದ ಅವರು, ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್‌ನಂತಹ ಅನುಭವಿ ಕಂಪೆನಿಗಳನ್ನು ಯಾಕೆ ನಿರ್ಲಕ್ಷಿಸಲಾಯಿತು. ರಫೇಲ್ ತಯಾರಿಯ ಗುತ್ತಿಗೆಯನ್ನು ನೂತನ ಕಂಪೆನಿಗಳಿಗೆ ಯಾಕೆ ನೀಡಲಾಯಿತು ? ಎಂದು ಪ್ರಶ್ನಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಂಘಟಿತರಾಗಬೇಕು ಎಂದು ಅವರು ಎಲ್ಲ ವಿಪಕ್ಷಗಳಲ್ಲಿ ಆಗ್ರಹಿಸಿದರು. ರೈತರನ್ನು ಉದ್ದೇಶಿಸಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹಾಗೂ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿದರು.

58 ಸಾವಿರ ಕೋ. ರೂ. ವೆಚ್ಚದಲ್ಲಿ ಫ್ರಾನ್ಸ್‌ನಿಂದ 36 ರಪೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ಯುದ್ಧ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News