ದಕ್ಷಿಣ ವಲಯ ಅಂತರ ವಿವಿ ಮಹಿಳಾ ಖೋ-ಖೋ: ರಾಣಿ ಚೆನ್ನಮ್ಮ, ಗುಲ್ಬರ್ಗ ವಿವಿಗಳಿಗೆ 2 ಜಯ

Update: 2018-10-15 17:15 GMT

ಉಡುಪಿ, ಅ.15: ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ಮಹಿಳೆಯರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಕರ್ನಾಟಕದ ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಹಾಗೂ ಗುಲ್ಬರ್ಗ ವಿವಿ ತಂಡಗಳು ತಲಾ ಎರಡು ಪಂದ್ಯಗಳ ಜಯವನ್ನು ದಾಖಲಿಸಿವೆ.

ಡಿ ಗುಂಪಿನಲ್ಲಿರುವ ರಾಣಿ ಚೆನ್ನಮ್ಮ ವಿವಿ ಮೊದಲ ಸುತ್ತಿನಲ್ಲಿ ತಮಿಳುನಾಡು ಭಾರತಿದಾಸನ್ ವಿವಿಯನ್ನು 15-07 ಮತ್ತು ಎರಡನೆ ಸುತ್ತಿನಲ್ಲಿ ಆಂಧ್ರಪ್ರದೇಶ ಆದಿಕವಿ ನಾನಯ್ಯ ವಿವಿಯನ್ನು 11-02 ಅಂಕಗಳ ಅಂತರದಲ್ಲಿ ಪರಾಜಗೊಳಿ ಸಿ ಮೂರನೆ ಸುತ್ತಿಗೆ ಪ್ರವೇಶಿಸಿದೆ.

ಅದೇ ರೀತಿ ಬಿ ಗುಂಪಿನಲ್ಲಿರುವ ಗುಲ್ಬರ್ಗ ವಿವಿಯು ಮೊದಲ ಸುತ್ತಿನಲ್ಲಿ ಬೆಂಗಳೂರಿನ ಕ್ರೈಸ್ತ ವಿವಿಯನ್ನು 12-03 ಮತ್ತು ದ್ವಿತೀಯ ಸುತ್ತಿನಲ್ಲಿ ತೆಲಂಗಾಣ ಮಹಾತ್ಮಾಗಾಂಧಿ ವಿವಿಯನ್ನು 09-04 ಅಂತರದಲ್ಲಿ ಸೋಲಿಸಿದೆ. ಪ್ರಥಮ ಸುತ್ತಿನಲ್ಲಿ ದಾವಣಗೆರೆ ವಿವಿಯು ಅನಂತಪುರಂ ಕೃಷ್ಣದೇವರಾಯ ವಿವಿಯ ವಿರುದ್ಧ 04-03 ಮತ್ತು ಬೆಂಗಳೂರು ವಿವಿಯು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿರು್ಧ 10-05 ಅಂತರದಲ್ಲಿ ಜಯ ಸಾಧಿಸಿವೆ.

ಆದರೆ ಶಿವಮೊಗ್ಗ ಕೃಷಿ ವಿವಿ ಎರಡನೆ ಸುತ್ತಿನಲ್ಲಿ ಹಾಗೂ ಧಾರವಾಡ ಕರ್ನಾಟಕ ವಿವಿ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ, ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿವಿ ಮತ್ತು ಶಿವಮೊಗ್ಗ ಕುವೆಂಪು ವಿವಿ ತಂಡಗಳು ಮೊದಲ ಸುತ್ತಿನಲ್ಲಿ ಪರಾಜಯ ಅನುಭವಿಸಿ ಪಂದ್ಯಾಟದಿಂದ ಹೊರಬಿದ್ದಿವೆ.
ತಿರುಪತಿ ಪದ್ಮಾವತಿ ಮಹಿಳಾ ವಿವಿ, ಗುಂಟೂರ್ ಆಚಾರ್ಯ ನಾಗಾ ರ್ಜುನ ವಿವಿ, ಮನೋನ್ಮಿಯಂ ಸುಂದರ್‌ನಾರ್ ವಿವಿ, ಆಂಧ್ರ ಯೋಗಿ ನೆಮನ ವಿವಿ, ಮಚಲೀಪಟ್ಟಣಂ ಕೃಷ್ಣ ವಿವಿ, ಮದ್ರಾಸ್ ವಿವಿ, ತಮಿಳುನಾಡು ದೈಹಿಕ ಶಿಕ್ಷಣ ಕ್ರೀಡಾ ವಿವಿ ಎರಡನೆ ಸುತ್ತಿನಲ್ಲಿ ಜಯ ಸಾಧಿಸಿ ಮೂರನೆ ಸುತ್ತಿಗೆ ತೇರ್ಗಡೆಗೊಂಡಿವೆ. 

ಆತಿಥೇಯ ಮಂಗಳೂರು ವಿವಿ ನೇರವಾಗಿ ಕ್ವಾರ್ಟರ್‌ಫೈನ್ನಲ್ಲಿ ತನ್ನ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News