ಉಡುಪಿ: ಅ.18ರಂದು ಲಾರಿ ಬಂದ್
Update: 2018-10-16 20:07 IST
ಉಡುಪಿ, ಅ.16: ಕಳೆದ ಐದು ವರ್ಷಗಳಿಂದ ಮರಳಿನ ಕೃತಕ ಅಭಾವ ಸೃಷ್ಟಿಸಿದ ಜಿಲ್ಲಾಡಳಿತದ ಕ್ರಮವನ್ನು ಪ್ರತಿಭಟಿಸಿ ಅ.18ರಂದು ಉಡುಪಿ ಜಿಲ್ಲೆಯ ಎಲ್ಲಾ ಕಟ್ಟಡ ಸಾಗಾಟ ಸಂಬಂಧಿ ವಾಹನಗಳನ್ನು ರಸ್ತೆಗಳಿಸದೇ ಸ್ವಯಂ ಪ್ರೇರಿತ ಹೋರಾಟ ನಡೆಸಲಾಗುವುದು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.
ಮರಳು ಸಮಸ್ಯೆ ಕುರಿತು ಚರ್ಚಿಸಲು ಇಂದು ಬನ್ನಂಜೆಯ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಲಾರಿ ಮಾಲಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಲಾರಿ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.