‘ಗಾಂಧಿ-150’ ಅಭಿಯಾನಕ್ಕೆ ಉಡುಪಿಯಲ್ಲಿ ಸ್ವಾಗತ
ಉಡುಪಿ, ಅ.16: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯಾದ್ಯಂತ ಸಂಚರಿಸುವ ‘ಗಾಂಧಿ ಅಭಿಯಾನ-150’ ಜಾಥಾ ಮಂಗಳವಾರ ಉಡುಪಿಗೆ ಆಗಮಿಸಿತು.
ಜಿಲ್ಲಾಡಳಿತದ ಪರವಾಗಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಅಭಿಯಾನವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ಈ ನಿಟ್ಟಿ ನಲ್ಲಿ ಇದನ್ನು ನಿರಂತರವಾಗಿ ಪಾಲಿಸುತ್ತಾ ಬರಬೇಕು. ವಾರ್ತಾ ಇಲಾಖೆ ಗಾಂಧೀ-150ನೇ ಜಯಂತಿ ಪ್ರಯುಕ್ತ ಅಭಿಯಾನ ಏರ್ಡಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗಾಂಧೀ ಅಭಿಯಾನ ರಥಕ್ಕೆ ಪುಷ್ಪಾರ್ಚನೆ ಮಾಡಲಾ ಯಿತು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಉಪಸ್ಥಿತರಿದ್ದರು. ಗಾಂಧೀಜಿ ಅವರ ಸಂದೇಶಗಳನ್ನು ಸಾರುವ ಸ್ಥಬ್ದಚಿತ್ರ ಹಾಗೂ ಗಾಂಧೀಜಿಗೆ ಪ್ರಿಯವಾದ ಭಜನೆ, ಸಂಗೀತಗಳನ್ನು ಸಾರುತ್ತಾ ಈ ಅಭಿಯಾನ ಸಂಚರಿಸಲಿದೆ. ಬುಧವಾರ ಬ್ರಹ್ಮಾವರ, ಕುಂದಾಪುರ ಮೂಲಕ ಗಾಂಧೀ-150 ಅಭಿಯಾನ ಸಾಗಲಿದೆ.